ಮೀನುಗಾರಿಕೆಗೆ ತೆರಳಿದ್ದ ವ್ಯಕ್ತಿ ಕಾಲುಜಾರಿ ನೀರಿಗೆ ಬಿದ್ದು ಮೃತ್ಯು..!

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ. 01. ಮೀನುಗಾರಿಕಾ ಬೋಟ್ ನಲ್ಲಿ ಮೀನುಗಾರಿಕೆಗೆಂದು ತೆರಳಿದ್ದ ಕಾರ್ಮಿಕನೋರ್ವ ಆಯತಪ್ಪಿ ನೀರಿಗೆ ಬಿದ್ದು ಮೃತಪಟ್ಟ ಘಟನೆ ಬಂದರ್ ದಕ್ಕೆಯಲ್ಲಿ ನಡೆದಿದೆ.

ಮೃತ ಮೀನುಗಾರನನ್ನು ಆಂದ್ರಪ್ರದೇಶ ಮೂಲದ ಮಲ್ಲಪಲ್ಲಿ ಅಪ್ಪಯ್ಯ (36) ಎಂದು ಗುರುತಿಸಲಾಗಿದೆ. ಮಂಗಳವಾರ ಸಂಜೆ ಮೀನುಗಾರಿಕೆಗೆಂದು ಬೋಟ್ ನಲ್ಲಿ ತೆರಳಿದ್ದ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ನೀರಿಗೆ ಬಿದ್ದಿದ್ದು, ಸುತ್ತಲೂ ಹುಡುಕಾಡಿದರೂ ಅವರು ಪತ್ತೆಯಾಗಿರಲಿಲ್ಲ. ಇಂದು (ಡಿ.01) ಬೆಳಗ್ಗೆ ಅಪ್ಪಯ್ಯ ಅವರ ಮೃತದೇಹವು ಬಂದರು ದಕ್ಕೆಯಲ್ಲಿ ಪತ್ತೆಯಾಗಿದೆ ಎನ್ನಲಾಗಿದೆ.

Also Read  ಸ್ವ ಉದ್ಯೋಗದಿಂದ ಯಶಸ್ವಿ ಕಂಡ ಸಹೋದರರು ➤ ಇತರರಿಗೆ ಮಾದರಿಯಾದ ಸವಣೂರಿನ ಯುವಕರು

 

error: Content is protected !!
Scroll to Top