ಟ್ವಿಟರ್ ಸಂಸ್ಥೆಯ ನೂತನ ಸಿಇಒ ಆಗಿ ಭಾರತೀಯ ಮೂಲದ ಪರಾಗ್ ಅಗರ್ವಾಲ್ ಆಯ್ಕೆ

(ನ್ಯೂಸ್ ಕಡಬ) newskadaba.com ನವದೆಹಲಿ, ನ. 30. ಟ್ವಿಟರ್ ಸಂಸ್ಥೆಯ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಯಾಗಿದ್ದ ಜ್ಯಾಕ್ ಡಾರ್ಸೆ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದು, ಇದೀಗ ನೂತನ ಸಿಇಒ ಆಗಿ ಭಾರತದ ಪರಾಗ್ ಅಗರವಾಲ್ ಆಯ್ಕೆಯಾಗಿದ್ದಾರೆ.

ಟ್ವಿಟರ್ ಸಂಸ್ಥೆಯ ಸಹ ಸಂಸ್ಥಾಪಕರಾಗಿದ್ದ ಜ್ಯಾಕ್ ಡಾರ್ಸೆ, ಈ ಸಂಸ್ಥೆಯಲ್ಲಿ16 ವರ್ಷಗಳ ಕಾಲ ಕಾರ್ಯ ನಿರ್ವಹಿಸಿದ್ದರು. ನೂತನ ಸಿಇಒ ಪರಾಗ್ ಅಗರ್ವಾಲ್ ಮುಂಬೈ ಐಐಟಿ ಯಲ್ಲಿ ಬಿಟೆಕ್ ಪದವಿ ಪಡೆದು, ಬಳಿಕ ಸ್ಯಾನ್ಫೋರ್ಡ್ ವಿವಿಯಲ್ಲಿ ಕಂಪ್ಯೂಟರ್ ಸೈನ್ಸ್ ವಿಷಯದಲ್ಲಿ ಪಿಹೆಚ್ ಡಿ ಪದವಿ ಪಡೆದಿದ್ದಾರೆ. ಬಳಿಕ ಮೈಕ್ರೋಸಾಫ್ಟ್ ಯಾಹೂ ಮತ್ತು ಎಟಿ ಆ್ಯಂಡ್ ಟಿ ಲ್ಯಾಬ್ಸ್ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸಿ ಬಳಿಕ 2011ರಲ್ಲಿ ಟ್ವಿಟರ್ ಸೇರಿದ್ದು, ಹಲವು ಜವಾಬ್ದಾರಿಗಳನ್ನು ನಿರ್ವಹಿಸಿ ಸಂಸ್ಥೆಯ ಏಳಿಗೆಯಲ್ಲಿ ಭಾಗಿಯಾಗಿರುವ ಪರಾಗ್ ಇದೀಗ ಅದೇ ಸಂಸ್ಥೆಯ ಮುಖ್ಯಸ್ಥ ಹುದ್ದೆಗೆ ಆಯ್ಕೆಯಾಗಿದ್ದಾರೆ.

Also Read  ಕಾಪು: ಕಲಬೆರಕೆ ಜೇನು ತುಪ್ಪ ಮಾರಾಟ ➤ ನಾಲ್ವರು ಆರೋಪಿಗಳ ಬಂಧನ

error: Content is protected !!
Scroll to Top