ಬೈಕ್ ಸವಾರರ ಮೇಲೆ ಪೆಪ್ಪರ್ ಸ್ಪ್ರೇ ಮಾಡಿ ದರೋಡೆ ➤ ಆರೋಪಿ ಮಂಗಳಮುಖಿ ಅರೆಸ್ಟ್

(ನ್ಯೂಸ್ ಕಡಬ) newskadaba.com ಮಂಗಳೂರು, ನ. 30. ಬೈಕ್ ನಲ್ಲಿ ತೆರಳುತ್ತಿದ್ದ ಸವಾರರನ್ನು ಟಾರ್ಗೆಟ್ ಮಾಡಿ ಸುಲಿಗೆ ಮಾಡುತ್ತಿದ್ದ ಆರೋಪಿ ಮಂಗಳಮುಖಿಯನ್ನು ಬಂಧಿಸಿದ ಘಟನೆ ವರದಿಯಾಗಿದೆ.


ಬಂಧಿತ ಮಂಗಳಮುಖಿಯನ್ನು ಬೆಂಗಳೂರಿನ ಇಜಿಪುರದ ಅಭಿಷೇಕ್ ಯಾನೆ ಗೊಂಬೆ ಯಾನೆ ಅನಾಮಿಕ ಎಂದು ಗುರುತಿಸಲಾಗಿದೆ. ಇಲ್ಲಿನ ನಂತೂರುಪದವು ಬಿಎಸ್ ಎನ್ ಎಲ್ ಎಕ್ಸ್ ಚೇಂಜ್ ಬಳಿ ಗಣೇಶ್ ಎಂಬವರು ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ ಮಂಗಳಮುಖಿ ರಸ್ತೆಗೆ ಅಡ್ಡ ಬಂದು ಗಣೇಶ್ ಅವರನ್ನು ತಡೆದು ನಿಲ್ಲಿಸಿ, ಪೆಪ್ಪರ್ ಸ್ಪ್ರೇ ಮಾಡಿ ಅವರ ಕುತ್ತಿಗೆಯಲ್ಲಿದ್ದ ಸುಮಾರು 24 ಗ್ರಾಂ ತೂಕದ ಚಿನ್ನದ ಸರವನ್ನು ಕದ್ದೊಯ್ದಿದ್ದನು. ಇದಕ್ಕೆ ಸಂಬಂಧಿಸಿ ಓರ್ವನನ್ನು ಬಂಧಿಸಲಾಗಿದ್ದು, ಈತನಿಂದ ಸುಮಾರು 71 ಗ್ರಾಂ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ.

Also Read  ಮಂಗಳೂರು: ರೈಲ್ವೇ ನೌಕರರಿಗೆ ನಕಲಿ ಸರ್ಟಿಫಿಕೇಟ್ ನೀಡಿದ್ದ ಆರೋಪಿಯ ಮೃತದೇಹ ರೈಲ್ವೇ ಹಳಿಯಲ್ಲಿ ಪತ್ತೆ..!!

error: Content is protected !!
Scroll to Top