ಮಂಗಳೂರು ನಗರ ಪೊಲೀಸ್ ಇಲಾಖೆಗೆ ಐವರು ಯೋಧರು ಸೇರ್ಪಡೆ

(ನ್ಯೂಸ್ ಕಡಬ) newskadaba.com ಮಂಗಳೂರು, ನ. 29. ಭಾರತೀಯ ಸೇನೆಯಲ್ಲಿ ಕರ್ತವ್ಯ ಸಲ್ಲಿಸಿ ನಿವೃತ್ತಿ ಹೊಂದಿದ ಐವರು ಯೋಧರು ಇದೀಗ ಮಂಗಳೂರು ನಗರ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯಕ್ಕೆ ಸೇರ್ಪಡೆಗೊಂಡಿದ್ದಾರೆ. ಉಮೇಶ.ಬಿ, ಹರಿಪ್ರಸಾದ್.ಕೆ, ಪದ್ಮನಾಭ ಆರ್.ಕೆ, ಜನಾರ್ಧನ ಮತ್ತು ಜಗನ್ನಾಥ ಶೆಟ್ಟಿ ಈ ಐವರು ನಿವೃತ್ತ ಯೋಧರಾಗಿದ್ದಾರೆ.

ಇವರು ಭಾರತೀಯ ಸೇನೆಯಲ್ಲಿ ಸುಮಾರು 17ರಿಂದ 20 ವರ್ಷಗಳ ಅವಧಿಯ ಅನುಭವ ಹೊಂದಿದ್ದು, ಭಾರತದ ಅಸ್ಸಾಂ, ಜಮ್ಮು-ಕಾಶ್ಮೀರ, ಮೀರತ್, ಮಿಜೋರಾಂ, ಪಂಜಾಬ್, ಅರುಣಾಚಲ ಪ್ರದೇಶ, ಲೇಹ್, ಲಡಾಕ್, ಅಹಮದಾಬಾದ್, ಕೇರಳ, ರಾಂಚಿ ಹಾಗೂ ರಾಜಸ್ಥಾನ ಮೊದಲಾದ ಪ್ರಮುಖ ಸ್ಥಳಗಳಲ್ಲಿ ಸೇವೆಗೈದಿದ್ದು, ಇವರ ಪೈಕಿ ಇಬ್ಬರು ವಿದೇಶಕ್ಕೆ ತೆರಳಿ ಸೇವೆ ಸಲ್ಲಿಸಿರುತ್ತಾರೆ. ಇದೀಗ ಸೇನೆಯಿಂದ ನಿವೃತ್ತಿ ಹೊಂದಿದ ಇವರು, ಮಂಗಳೂರು ನಗರ ಪೊಲೀಸ್ ಘಟಕದಲ್ಲಿ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗೆ ನೇಮಕಾತಿ ಹೊಂದಿ ತರಬೇತಿ ಪಡೆದು ಇಲಾಖಾ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಸುಮಾರು ಇಪ್ಪತ್ತು ವರ್ಷಗಳ ಕಾಲ ಸೇವೆ ಸಲ್ಲಿಸಿ, ಇದೀಗ ಪೊಲೀಸ್ ಇಲಾಖೆಗೆ ನಿಯೋಜನೆಗೊಂಡಿರುವುದು ಹೆಮ್ಮೆಯ ಸಂಗತಿ. ಹಾಗೆಯೇ ಸುದೀರ್ಘ ಅನುಭವ ಹೊಂದಿದ ಇವರೆಲ್ಲ ಭಯೋತ್ಪಾದನೆ ಹಾಗೂ ಕೋಮು ಸಂಘರ್ಷಗಳ ತಾಣವಾದ ಕರಾವಳಿಗೆ ಇನ್ನೂ ಹೆಚ್ಚಿನ ಭದ್ರತೆ ಒದಗಿಸಲು ಸಹಕಾರಿಯಾಗಲಿವೆ ಎಂದು ಹಿರಿಯ ಅಧಿಕಾರಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Also Read  ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮ ➤ ಸಾಲ ಸೌಲಭ್ಯ ಅರ್ಜಿ ಆಹ್ವಾನ

error: Content is protected !!
Scroll to Top