ಬನ್ನೂರಿನ ದೈವ ಸೇವಾಕಾರ್ಯದ ಮಧ್ಯಸ್ಥ ಭರತ್ ಭಂಡಾರಿ ವಿಧಿವಶ

(ನ್ಯೂಸ್ ಕಡಬ) Newskadaba.com ಪುತ್ತೂರು, ನ. 29. ದೈವ ಸೇವಾಕಾರ್ಯದಲ್ಲಿ ಮಧ್ಯಸ್ಥರಾಗಿ ಸೇವೆ ಮಾಡುತ್ತಿದ್ದ ಬನ್ನೂರು ನಿವಾಸಿ ಭರತ್ ಭಂಡಾರಿ ಅನಾರೋಗ್ಯದಿಂದ ಸೋಮವಾರದಂದು ನಸುಕಿನ ಜಾವ ದೇರಳಕಟ್ಟೆ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಯಕ್ಷಗಾನ ಕಲಾವಿದ ಗಂಗಾಧರ ಭಂಡಾರಿಯವರ ಪುತ್ರ ಭರತ್ ಭಂಡಾರಿ ಅವರು ದೈವ ಸೇವಾ ಕಾರ್ಯದಲ್ಲಿ ಮಧ್ಯಸ್ಥರಾಗಿ ತೊಡಗಿಸಿಕೊಂಡು ಎಲ್ಲರಿಗೂ ಚಿರಪರಿಚಿತರಾಗಿದ್ದರು. ಇತ್ತೀಚೆಗೆ ಜಾಂಡೀಸ್ ಖಾಯಿಲೆಗೆ ತುತ್ತಾಗಿ ದೇರಳಕಟ್ಟೆ ಆಸ್ಪತ್ರೆಗೆ ದಾಖಲಾಗಿದ್ದರು. ಮೃತರು ತಂದೆ, ತಾಯಿ ಹಾಗೂ ಸಹೋದರಿಯನ್ನು ಅಗಲಿದ್ದಾರೆ.

Also Read  ಆದ್ಯಪಾಡಿ ಮಹಿಳಾ ಸಿಬ್ಬಂದಿಗೆ ಲೈಂಗಿಕ‌ ಕಿರುಕುಳ ಪ್ರಕರಣಕ್ಕೆ ಹೊಸ ತಿರುವು ► ಬೈಕಿಗೆ ಢಿಕ್ಕಿ ಹೊಡೆದಿರುವುದನ್ನು ವಿಚಾರಿಸಿದ್ದಕ್ಕೆ ಕಾರಿನಲ್ಲಿದ್ದವರು ಹಲ್ಲೆ ನಡೆಸಿದ್ದಾರೆಂದು ಮರು ದೂರು

error: Content is protected !!
Scroll to Top