ಎಸ್ ಬಿಐ ಬ್ಯಾಂಕ್ ಎಟಿಎಂ ಗೆ ಕಿಡಿಗೇಡಿಗಳಿಂದ ಹಾನಿ

(ನ್ಯೂಸ್ ಕಡಬ) newskadaba.com ಸುರತ್ಕಲ್, ನ. 29. ಎಸ್ಬಿಐ ಬ್ಯಾಂಕ್ ನ ಎಟಿಎಂ ಅನ್ನು ವ್ಯಕ್ತಿಯೋರ್ವ ಒಡೆದು ಪುಡಿಗಟ್ಟಿದ ಘಟನೆ ಇಲ್ಲಿನ ಎಂಆರ್ ಪಿಎಲ್ ರಸ್ತೆಯ ಕಟ್ಲ ತಿರುವು ಬಳಿ ನಡೆದಿದೆ.

ಕಳೆದ ಸೆ. 09ರಂದು ಇದೇ ರೀತಿಯ ಘಟನೆ ಉಂಟಾಗಿದ್ದು, ವಿಚಾರಣೆ ನಡೆಸಲಾಗಿತ್ತು. ಆದರೆ ಇದೀಗ ಮತ್ತೆ ಬ್ಯಾಂಕ್ ನ ಎಟಿಎಂ ಯಂತ್ರವನ್ನು ಉರುಳಿಸಿ, ಎಸಿ ಹಾಗೂ ಸಿಸಿಟಿವಿಯ ಗಾಜನ್ನು ಪುಡಿಮಾಡಲಾಗಿದ್ದು, ಲಕ್ಷಾಂತರ ರೂ. ನಷ್ಟವುಂಟಾಗಿದೆ ಎನ್ನಲಾಗಿದೆ. ಈ ಕುರಿತು ಕಟ್ಟಡ ಮಾಲಕ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ.

Also Read  ಅನಧಿಕೃತ ಬ್ಯಾನರ್ ಅಳವಡಿಕೆ - ಡಿಕೆ ಶಿವಕುಮಾರ್ ಗೆ 50 ಸಾವಿರ ರೂ. ದಂಡ

error: Content is protected !!
Scroll to Top