(ನ್ಯೂಸ್ ಕಡಬ) newskadaba.com ತಿರುವನಂತಪುರಂ, ನ. 27. ಇನ್ನುಮುಂದೆ ಆರ್ಟಿಪಿಸಿಆರ್ ಟೆಸ್ಟ್ ವರದಿ ಇಲ್ಲದೇ ಮಕ್ಕಳು ಶಬರಿಮಲೆ ದೇವಾಲಯಕ್ಕೆ ಹೋಗಲು ಕೇರಳ ಸರಕಾರ ಅವಕಾಶ ಕೊಟ್ಟಿದೆ.
ಮಕ್ಕಳ ಜೊತೆಲಿರುವ ಪೋಷಕರು ಸಾಮಾಜಿಕ ಅಂತರ ಪಾಲನೆ, ಮಾಸ್ಕ್ ಧರಿಸುವಿಕೆ ಹಾಗೂ ಸ್ಯಾನಿಟೈಸರ್ ಒಳಗೊಳಡಂತೆ ಕೋವಿಡ್ ನಿಯಮಾವಳಿಗಳನ್ನು ಪಾಲಿಸಬೇಕು. ಹಾಗೇ ಮಕ್ಕಳ ಆರೋಗ್ಯ ಸಮಸ್ಯೆಗಳಿಗೆ ಅವರೇ ಹೊಣೆಯಾಗಿರುತ್ತಾರೆ ಎಂದು ಸೂಚನೆಯಲ್ಲಿ ತಿಳಿಸಲಾಗಿದೆ. ಯುವಕರಿಗೆ ದೇವಾಲಯ ಪ್ರವೇಶಕ್ಕೆ 72 ಗಂಟೆಗಳ ಒಳಗಿನ ಆರ್ಟಿಪಿಸಿಆರ್ ನೆಗೆಟಿವ್ ಪ್ರಮಾಣ ಪತ್ರ ಹಾಗೂ ಲಸಿಕಾ ಪ್ರಮಾಣ ಪತ್ರ ಅಗತ್ಯವಾಗಿರುವುದು ಎಂದೂ ಸೂಚನೆಯಲ್ಲಿ ಹೇಳಲಾಗಿದೆ.