ರೂಪಾಂತರಿ ವೈರಸ್ ಭೀತಿಯಿಂದಾಗಿ ಡಿ.15ರ ವರೆಗೆ ಅಂತರಾಷ್ಟ್ರೀಯ ವಿಮಾನಯಾನ ನಿಷೇಧ..! ➤ ಭಾರತ ಸರಕಾರ ಘೋಷಣೆ

(ನ್ಯೂಸ್ ಕಡಬ) newskadaba.com ನವದೆಹಲಿ, ನ. 27. ರೂಪಾಂತರಿ ವೈರಸ್ ಭೀತಿಯಿಂದಾಗಿ ಭಾರತ ಸರಕಾರವು ತನ್ನ ಅಂತರ್ರಾಷ್ಟ್ರೀಯ ವಿಮಾನಯಾನ ನಿಷೇಧವನ್ನು ಡಿಸೆಂಬರ್ 15ರ ವರೆಗೆ ವಿಸ್ತರಿಸಿದೆ.

ಸರಕಾರದ ಈ ನಿರ್ಧಾರದಿಂದಾಗಿ ಡಿಸೆಂಬರ್ 1 ರ ನಂತರ ನೇರವಾಗಿ ಸೌದಿ ಅರೇಬಿಯಾಕ್ಕೆ ಪ್ರಯಾಣಿಸಲು ಉದ್ದೇಶಿಸಿದ ಅನಿವಾಸಿ ಭಾರತೀಯ ನಾಗರೀಕರಿಗೆ ನಿರಾಶೆಯುಂಟಾಗಿದೆ. ಸೌದಿ ಸರಕಾರ ಭಾರತೀಯರಿಗೆ ನೇರ ಪ್ರಯಾಣಕ್ಕೆ ಅನುಮತಿ ನೀಡಿದರೂ ಭಾರತ ಸರಕಾರದ ನಿರ್ಧಾರದಿಂದಾಗಿ ಸೌದಿಗೆ ಪ್ರಯಾಣಿಸಲಿರುವ ಅನಿವಾಸಿ ಭಾರತೀಯರು ಮತ್ತೊಮ್ಮೆ ಚಾರ್ಟರ್ಡ್ ವಿಮಾನವನ್ನು ಅವಲಂಬಿಸುವಂತಾಗಿದೆ.

Also Read  ಅಮೇರಿಕಾದ ಸರ್ಜನ್ ಜನರಲ್ ಆಗಿ ಕರ್ನಾಟಕದ ವೈದ್ಯ ವಿವೇಕ್ ಮೂರ್ತಿ ನೇಮಕ

error: Content is protected !!
Scroll to Top