ಹೊಸ ರೂಪಾಂತರಿ ವೈರಸ್ ಪತ್ತೆ ಹಿನ್ನೆಲೆ ➤ ಇಂದು ಸಿಎಂ ಮಹತ್ವದ ಸಭೆ ➤➤ ದ.ಕ. ಸೇರಿದಂತೆ 5 ಜಿಲ್ಲೆಗಳು ಲಾಕ್ಡೌನ್ ಸಾಧ್ಯತೆ..!

(ನ್ಯೂಸ್ ಕಡಬ) newskadaba.com ಬೆಂಗಳೂರು, ನ. 27. ದಿನದಿಂದ ದಿನಕ್ಕೆ ಏರುತ್ತಿರುವ ಕೊರೋನಾ ರಣಕೇಕೆಯಿಂದ ಕರ್ನಾಟಕದ ಐದು ಜಿಲ್ಲೆಗಳು ಮತ್ತೊಮ್ಮೆ ಲಾಕ್-ಡೌನ್ ಆಗುವ ಸಾದ್ಯತೆಗಳಿದ್ದು, ಇಂದು ಸಂಜೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಕೃಷ್ಣಾದಲ್ಲಿ ರಾಜ್ಯದ 7 ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜೊತೆ ಮಹತ್ವದ ಸಭೆ ಕರೆದಿದ್ದಾರೆ.


ದಿನದಿಂದ ದಿನಕ್ಕೆ ಬೆಂಗಳೂರು, ದಕ್ಷಿಣ ಕನ್ನಡ, ಚಾಮರಾಜನಗರ, ಕೊಡಗು ಹಾಗೂ ಧಾರವಾಡ ಜಿಲ್ಲೆಗಳಲ್ಲಿ ಕೊರೊನಾ ತನ್ನ ಅಟ್ಟಹಾಸ ಮುಂದುವರೆದಿದ್ದು, ಇವುಗಳ ಕುರಿತಾಗಿ ಇಂದು ಸಿಎಂ ನೇತೃತ್ವದಲ್ಲಿ ಮಹತ್ವದ ವೀಡಿಯೋ ಕಾನ್ಫರೆನ್ಸ್ ನಡೆಯಲಿದೆ. ಇನು ಮುಂದೆ ಲಾಕ್-ಡೌನ್ ಆಗುತ್ತೋ ಇಲ್ಲವೋ ಎಂದು ಇಂದು ನಡೆಯಲಿರುವ ಸಭೆಯ ಬಳಿಕ ತಿಳಿಯಬೇಕಿದೆ.

ಇದಾದ ನಂತರ ತಜ್ಞರನ್ನು ಒಳಗೊಂಡ ಮಹತ್ವದ ಸಭೆಯೊಂದನ್ನು ಸೋಮವಾರ ಕರೆದಿದ್ದು, ಆ ಸಭೆಯಲ್ಲಿ ಕರ್ನಾಟಕದ ಕೊರೊನಾ ಲಾಕ್-ಡೌನ್ ಪರಿಸ್ಥಿತಿಯ ಸಂಪೂರ್ಣ ಚಿತ್ರಣ ದೊರಕಲಿದೆ ಎನ್ನಲಾಗಿದೆ. ಅಂತೂ ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ರಾಜ್ಯದ 5 ಜಿಲ್ಲೆಗಳು ಲಾಕ್ ಆಗುವ ಪರಿಸ್ಥಿತಿ ಹೆಚ್ಚಿದೆ. ಸಭೆ ಬಳಿಕ ಮುಂದಿನ ಕ್ರಮಗಳ ಬಗ್ಗೆ ಮಾಹಿತಿ ನೀಡುತ್ತೇವೆ ಮತ್ತು ಜನರಿಗೆ ಮುಂಜಾಗ್ರತಾ ಕ್ರಮಗಳ ಬಗ್ಗೆ ತಿಳಿಸುತ್ತೇವೆ. ಅಲ್ಲದೇ, ರಾಜ್ಯದಲ್ಲಿ ತಡ ಮಾಡದೆ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಬೊಮ್ಮಾಯಿ ತಿಳಿಸಿದ್ದಾರೆ. ಏರ್ ಪೋರ್ಟ್ ಹಾಗೂ ರಾಜ್ಯದ ಗಡಿ ಭಾಗದಲ್ಲಿ ತೆಗೆದುಕೊಳ್ಳಬೇಕಾದ ‌ಬಿಗಿ ಕ್ರಮಗಳು, ಶಾಲೆಗಳಲ್ಲಿ ಅನುಸರಿಸಬೇಕಾದ ಮುಂಜಾಗ್ರತಾ ಕ್ರಮಗಳು, ವಿದೇಶದಿಂದ ಬರುವವರಿಗೆ ಕ್ವಾರಂಟೈನ್ ಮಾಡುವುದು, ಗಡಿ ಭಾಗದಲ್ಲಿ ರಾಜ್ಯಕ್ಕೆ ಬಂದು ಹೋಗುವವರ ಮೇಲೆ ಯಾವ ರೀತಿ ನಿಗಾ ವಹಿಸಬೇಕು. ಹೀಗೆ ಹಲವು ಮಹತ್ವದ ವಿಚಾರಗಳು ಚರ್ಚೆಯಾಗಲಿದ್ದು, ನಂತರ ನಿಯಮಾವಳಿಗಳನ್ನು ಘೋಷಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

Also Read  ಚಿಕ್ಕಮಗಳೂರು: ಬೈಕ್ ಕಾರು ಢಿಕ್ಕಿ ► ಕಡಬದ ವ್ಯಕ್ತಿ ಗಂಭೀರ

error: Content is protected !!
Scroll to Top