ಕೂಳೂರು ನಾಗನಕಟ್ಟೆ ದ್ವಂಸ ಪ್ರಕರಣ ➤ ಎಂಟು ಮಂದಿ ಪೊಲೀಸ್ ವಶಕ್ಕೆ

(ನ್ಯೂಸ್ ಕಡಬ) newskdaba.com ಮಂಗಳೂರು, ನ. 27. ಇಲ್ಲಿನ ಕೂಳೂರು ಮತ್ತು ಕೋಡಿಕಲ್ ನಾಗಬನಕ್ಕೆ ದ್ವಂಸಗೈದ ಪ್ರಕರಣಕ್ಕೆ ಸಂಬಂಧಿಸಿ ಎಂಟು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಸಫಾನ್, ಪ್ರವೀಣ್ ಮೊಂತೆರೊ, ಮುಹಮ್ಮದ್ ಸುಹೇಲ್, ನಿಖಿಲೇಶ್, ಜಯಂತ್, ಮಂಜುನಾಥ್, ನೌಶಾದ್ ಹಾಗೂ ಪ್ರತೀಕ್ ಎಂದು ಗುರುತಿಸಲಾಗಿದೆ. ಬಂಧಿತರು ಬೇರೆ ಕೃತ್ಯಗಳಲ್ಲಿ ತೊಡಗಿದ್ದ ಹಿನ್ನೆಲೆ, ಪೊಲೀಸರ ಗಮನವನ್ನು ಬೇರೆಡೆ ಸೆಳೆಯಲು ಈ ಕೃತ್ಯ ನಡೆಸಿರುವುದಾಗಿ ಪೊಲೀಸ್ ಆಯುಕ್ತ ಎನ್.ಶಶಿ ಕುಮಾರ್ ತಿಳಿಸಿದ್ದಾರೆ. ಬೇರೆ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ ತಂಡವು ಪೊಲೀಸರ ದಿಕ್ಕು ತಪ್ಪಿಸಲು ಮತ್ತು ಶಾಂತಿ ಕದಡಲು ನಾಗಬನಗಳ ಧ್ವಂಸ ಮಾಡಿತ್ತು ಎಂದು ಅವರು ಮಾಹಿತಿ ನೀಡಿದ್ದಾರೆ.

Also Read  ಮಾಧ್ಯಮಗಳ ಮುಂದೆ ಹೇಳಿಕೆ ನೀಡಿ ಮುಜುಗರ ಉಂಟುಮಾಡಬೇಡಿ ➤ ರೂಪಾ v/s ಸಿಂಧೂರಿಗೆ ಸರ್ಕಾರ ಆದೇಶ

error: Content is protected !!
Scroll to Top