(ನ್ಯೂಸ್ ಕಡಬ) newskadaba.com ಮಂಗಳೂರು, ನ. 27. ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಮೂಡಬಿದ್ರೆ ವಿಧಾನಸಭಾ ಕ್ಷೇತ್ರ ಸಮಿತಿ ವತಿಯಿಂದ “ಸಂವಿಧಾನ ದಿನ” ದ ಅಂಗವಾಗಿ ಬಜ್ಪೆ ಜಂಕ್ಷನ್ ನಲ್ಲಿ ಸಂವಿಧಾನ ದೀಕ್ಷೆ ಕಾರ್ಯಕ್ರಮವು ನಡೆಯಿತು.
ಇದರ ಅದ್ಯಕ್ಷತೆಯನ್ನು ಮೂಡಬಿದಿರೆಯ ಕ್ಷೇತ್ರ ಸಮಿತಿ ಅದ್ಯಕ್ಷ ಆಸಿಫ್ ಕೋಟೆಬಾಗಿಲು ವಹಿಸಿದ್ದರು. ಅಧ್ಯಕ್ಷೀಯ ಭಾಷಣ ಮಾಡಿದ ಅವರು, ಇಂದು ದೇಶದಲ್ಲಿ ಮನುವಾದವನ್ನು ಆರ್ ಎಸ್ಸೆಸ್ ಅನುಷ್ಟಾನಗೊಳಿಸಲು ಪ್ರಯತ್ನಿಸುತ್ತಿದ್ದು, ಅದನ್ನು ವಿಫಲಗೊಳಿಸಿ ಬಾಬಾ ಸಾಹೇಬರು ನೀಡಿದ ಸಂವಿಧಾನವನ್ನು ಉಳಿಸಲು ಪ್ರಯತ್ನಿಸಬೇಕೆಂದರು. ದೇಶದಲ್ಲಿ ಭಯೋತ್ಪಾದನಾ ಕ್ರತ್ಯ ನಡೆಸಿದ ಸಾದ್ವಿ ಪ್ರಜ್ನಾ ಸಿಂಗ್ ರಂತವರಿಗೆ ಬಿಜೆಪಿ ಲೋಕಸಭೆಯಲ್ಲಿ ಟಿಕೆಟ್ ಕೊಟ್ಟಿರುವುದು ದೇಶದ ಸಂವಿಧಾನಕ್ಕೆ ಅಪಚಾರವಾಗಿದ್ದು, ಇಂತಹ ಭಯೋತ್ಪಾದನೆಗೆ ಬೆಂಬಲ ಕೊಡುವ ಪಕ್ಷಕ್ಕೆ ಜನ ತಕ್ಕ ಪಾಠ ಕಲಿಸಬೇಕಾಗಿದೆ ಎಂದರು. ಜಿಲ್ಲೆಯಲ್ಲಿ ಸಂಘಪರಿವಾರವು ಕಲಹ ಎಬ್ಬಿಸಲು ಪ್ರಯತ್ನಿಸುತ್ತಿದ್ದು, ಕಳೆದ ಕೆಲವು ದಿನಗಳಿಂದ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿ ಭಯದ ವಾತಾವರಣವನ್ನು ನಿರ್ಮಿಸುತ್ತಿದೆ. ಅಂದು ತ್ರಿಶೂಲ ದೀಕ್ಷೆ ಎಂಬ ಅಸಂವಿಧಾನಿಕ ಕಾರ್ಯಕ್ರಮವನ್ನು ಪೋಲೀಸರು ತಡೆ ಹಿಡಿಯುತ್ತಿದ್ದರೆ, ಇಂದು ಪುತ್ತೂರಿನಲ್ಲಿ ತ್ರಿಶೂಲದಿಂದ ತಿವಿಯುವ ಘಟನೆ ನಡೆಯುತ್ತಿರಲಿಲ್ಲ. ಈಗ ಪೊಲೀಸ್ ಇಲಾಖೆಯನ್ನು ಕೂಡಾ ಭಯ ಪಡಿಸುತ್ತಿದ್ದು, ಜಿಲ್ಲಾಧಿಕಾರಿಯ ಕೊರಳಪಟ್ಟಿ ಹಿಡಿಯುವಷ್ಟರ ಮಟ್ಟಿಗೆ ಬೆದರಿಕೆಗಳು ಹಾಕುತ್ತಿದ್ದು, ಪೋಲೀಸ್ ಅಧಿಕಾರಿಗಳ ಕಾಲು ಕಡಿಯುವಷ್ಟರ ಮಟ್ಟಿಗೆ ಬೆಳೆದು ನಿಂತಿದ್ದು, ಇಂತಹ ಸಮಾಜಘಾತುಕ ಶಕ್ತಿಗಳ ಹೆಡೆಮುರಿ ಕಟ್ಟಲು ಎಸ್ಡಿಪಿಐ ಗೆ ಚೆನ್ನಾಗಿ ಗೊತ್ತಿದೆ ಅದಕ್ಕಿಂತ ಮೊದಲು ಪೊಲೀಸ್ ಇಲಾಖೆ ಎಚ್ಚತ್ತುಕೊಂಡು ಸೂಕ್ತ ಸೆಕ್ಷನ್ ಗಳಡಿಯಲ್ಲಿ ಬಂಧಿಸಬೇಕೆಂದು ಎಚ್ಚರಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ವಿಧಾನಸಭಾ ಕ್ಷೇತ್ರದ ಕಾರ್ಯದರ್ಶಿ ಅಝರ್ ತೋಡಾರು, ಸಂವಿಧಾನದ ಉಳಿವಿಗಾಗಿ ಎಸ್ಡಿಪಿಐ ಕಾರ್ಯಕರ್ತರು ಕಟಿಬದ್ಧರಾಗಿದ್ದು, ತಮ್ಮೊಂದಿಗೆ ಜನಸಾಮಾನ್ಯರು ಕೈಜೋಡಿಸಬೇಕೆಂದರು. ಸಭೆಯಲ್ಲಿ ಮುಂಬೈ ದಾಳಿಯಲ್ಲಿ ಹುತಾತ್ಮರಾದ ಹೇಮಂತ್ ಕರ್ಕೇರ, ಅಶೋಕ್ ಕಾಮ್ಟೆ ಮುಂತಾದ ಪೋಲೀಸ್ ಅಧಿಕಾರಿಗಳಿಗೆ ಮೌನ ಪ್ರಾರ್ಥನೆಯ ಮುಖಾಂತರ ಶ್ರಧ್ಧಾಂಜಲಿ ಸಮರ್ಪಿಸಲಾಯಿತು. ನಂತರ ಸಂವಿಧಾನದ ಪೀಠಿಕೆಯ ಪ್ರತಿಯನ್ನು ಹಂಚಿ ಪ್ರತಿಜ್ಞಾ ವಿಧಿಯನ್ನು ಕ್ಷೇತ್ರಾಧ್ಯಕ್ಷ ಆಸಿಫ್ ಕೋಟೆಬಾಗಿಲು ಭೋದಿಸಿದರು. ಕಾರ್ಯಕ್ರಮದಲ್ಲಿ ವಿಧಾನಸಭಾ ಉಪಾದ್ಯಕ್ಷ ನಿಸಾರ್ ಮರವೂರು, ಕೋಶಾಧಿಕಾರಿ ಅಯ್ಯೂಬ್ ಸೂರಿಂಜೆ, ಬಜ್ಪೆ ಬ್ಲಾಕ್ ಅದ್ಯಕ್ಷ ಸಲಾಂ ಸೂರಿಂಜೆ, ಹಾಗೂ ಕಾರ್ಯದರ್ಶಿ ಫರ್ವೀಝ್ ಅಲಿ ಜೋಕಟ್ಟೆ ಉಸ್ಥಿತರಿದ್ದರು. ಬಜ್ಪೆ ಪಟ್ಟಣ ಪಂಚಾಯತ್ ಅದ್ಯಕ್ಷ ಇಸ್ಮಾಯಿಲ್ ಇಂಜಿನಿಯರ್ ಸ್ವಾಗತಿಸಿದರು. ವಿಧಾನಸಭಾ ಕ್ಷೇತ್ರ ಜೊತೆ ಕಾರ್ಯದರ್ಶಿ ಇಮ್ರಾನ್ ಬಜ್ಪೆ ಕಾರ್ಯಕ್ರಮ ನಿರೂಪಿಸಿ ಧನ್ಯವಾದಗೈದರು.