ಯಕ್ಷಗಾನ ಕಲೆಯನ್ನು ಅವಮಾನ ಮಾಡಿದ ದಿಗ್ವಿಜಯ್ ಚಾನೆಲ್ ನಿರೂಪಕ ರಕ್ಷಿತ್ ಶೆಟ್ಟಿ ➤ ಕ್ಷಮೆ ಕೇಳಲು ಪಟ್ಟು ಹಿಡಿದ ಕಲಾಭಿಮಾನಿಗಳು

(ನ್ಯೂಸ್ ಕಡಬ) newskadaba.com ಮಂಗಳೂರು, ನ. 27. ಮಂಗಳೂರಿನ ಹೆಸರಾಂತ ವೆನ್ ಲಾಕ್ ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿ ನಡೆಸಿದಂತಹ ರಾಸಲೀಲೆಯ ವೀಡಿಯೋ ಹಾಗೂ ಫೋಟೊಗಳು ಸಮಾಜಿಕ ಜಾಲತಾಣದಲ್ಲಿ ಹರಡುತ್ತಿದ್ದಂತೆಯೇ ಹಲವು ಮಾಧ್ಯಮಗಳು ಈ ಕುರಿತು ವರದಿ ಮಾಡಿದ್ದವು. ಇದೇ ಸಂದರ್ಭದಲ್ಲಿ ದಿಗ್ವಿಜಯ ನ್ಯೂಸ್ ಚ್ಯಾನೆಲ್ ವಾಹಿನಿಯ ನಿರೂಪಕ ರಕ್ಷಿತ್ ಶೆಟ್ಟಿ ರಾಸಲೀಲೆಯನ್ನು ಯಕ್ಷಗಾನಕ್ಕೆ ಹೋಲಿಸಿದ ಘಟನೆ ವರದಿಯಾಗಿದೆ.


ಇದು ಯಕ್ಷಗಾನ ಕಲಾವಿದರ ಕುಟುಂಬಕ್ಕೆ ಮತ್ತು ಹಿಂದೂ ಸಂಪ್ರದಾಯಕ್ಕೆ ನೋವುಂಟು ಮಾಡಿದ್ದು, ರೊಚ್ಚಿಗೆದ್ದಿದ್ದಾರೆ. ಕರಾವಳಿಯ ಬಹುದೊಡ್ಡ ಸಂಸ್ಕೃತಿ ಮತ್ತು ಹಲವು ಕುಟುಂಬಗಳ ಜೀವನವು ಯಕ್ಷಗಾನದಲ್ಲಿದ್ದು, ಇದನ್ನು ನೀಚವಾಗಿ ಹೋಲಿಸಿದ ದಿಗ್ವಿಜಯ ಚಾನೆಲ್ ನಿರೂಪಕನು ಆ ವರದಿಯನ್ನು ಡಿಲೀಟ್ ಮಾಡಿ ಯಕ್ಷಗಾನ ಕಲಾವಿದರಲ್ಲಿ ಕ್ಷಮೆಯಾಚನೆ ಮಾಡಬೇಕು. ಇಲ್ಲವಾದಲ್ಲಿ ಹಿಂದೂಗಳು ಮತ್ತು ಯಕ್ಷಗಾನ ಕಲಾಭಿಮಾನಿಗಳ ಒಕ್ಕೂಟ ಸಂಘದಿಂದ ಕರ್ನಾಟಕದಾದ್ಯಂತ ಬಹುದೊಡ್ಡ ಹೋರಾಟ ಮಾಡಲಿದ್ದೇವೆ ಎಂದು ಎಚ್ಚರಿಸಿದ್ದಾರೆ.

Also Read  ಅನಧಿಕೃತ ಧಾರ್ಮಿಕ ಕಟ್ಟಡ ತೆರವುಗೊಳಿಸಿ- ಜಿಲ್ಲಾಧಿಕಾರಿ

 

 

 

error: Content is protected !!
Scroll to Top