ಎಸ್ ವೈಎಸ್ ಸೂರಿಕುಮೇರು ವತಿಯಿಂದ ಜಲಾಲಿಯ್ಯ ರಾತೀಬ್ ಮಜ್ಲಿಸ್ ➤ ದೀನ್ ವಿರೋಧಿಸಿದ್ದನ್ನು ವಿರೋಧಿಸಲು ಸಾಧ್ಯವಾಗಬೇಕು- ಇಸ್ಹಾಕ್ ಫೈಝಿ ಉಚ್ಚಿಲ

(ನ್ಯೂಸ್ ಕಡಬ) newskadaba.com ಮಾಣಿ, ನ. 25. ನೂತನವಾದವನ್ನು ಮತ್ತು ನೂತನವಾದಿಗಳನ್ನು ವಿರೋಧಿಸಲು ಸಾಧ್ಯವಾಗಬೇಕು ದೀನ್ ನಮಗೆ ಬಹಳ ಸ್ಪಷ್ಟವಾಗಿ ಅದನ್ನು ಕಲಿಸಿದೆ ಅದು ಸಾಧ್ಯವಾಗದಿದ್ದರೆ ಈಮಾನಿನ ಶಕ್ತಿ ಕಡಿಮೆ ಇದೆ ಎಂದು ಅರ್ಥೈಸಬೇಕು. ಮನಸ್ಸಿನ ಮೂಲಕವಾದರೂ ನೂತನವಾದಿಯನ್ನು ವಿರೋಧಿಸದಿದ್ದರೆ ದ್ವಿಲೋಕ ವಿಜಯ ಸಾಧ್ಯವಾಗದು ಎಂದು ಬಹು| ಇಸಾಕ್ ಫೈಝಿ ಉಚ್ಚಿಲ ಹೇಳಿದರು.

ಅವರು ಎಸ್‌ವೈ‌ಎಸ್ ಮತ್ತು ಎಸ್ಸೆಸ್ಸೆಫ್ ಸೂರಿಕುಮೇರು ಇದರ ವತಿಯಿಂದ ಹಾಜಿ ಯೂಸುಫ್ ರವರ ನಿವಾಸದಲ್ಲಿ ನಡೆದ ಜಲಾಲಿಯ್ಯಾ ರಾತೀಬ್ ಮಜ್ಲಿಸ್‌ಗೆ ನೇತೃತ್ವ ನೀಡಿ ಮಾತನಾಡಿದರು.‌ ಮಾಣಿ ದಾರುಲ್ ಇರ್ಶಾದ್ ಮುದರ್ರಿಸ್ ಯಾಕೂಬ್ ಸಅದಿ ಬೆಟ್ಟಂಪಾಡಿ ದುಆ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಎಸ್‌ವೈ‌ಎಸ್ ಮಾಣಿ ಸೆಂಟರ್ ಅಧ್ಯಕ್ಷರಾದ ಸುಲೈಮಾನ್ ಸಅದಿ ಪಾಟ್ರಕೋಡಿ, ಜಿಲ್ಲಾ ಕೌನ್ಸಿಲರ್ ಹಾಜಿ ಯೂಸುಫ್ ಸಯೀದ್ ಪುತ್ತೂರು, ಎಸ್‌ವೈ‌ಎಸ್ ಸೂರಿಕುಮೇರು ಬ್ರಾಂಚ್ ಅಧ್ಯಕ್ಷ ಅಬ್ದುಲ್ ಕರೀಂ ನೆಲ್ಲಿ, ಕೋಶಾಧಿಕಾರಿ ಇಬ್ರಾಹಿಂ ಮಾಣಿ, ಇಸಾಬಾ ಸೆಕ್ರೆಟರಿ ಹನೀಫ್ ಸಂಕ, ಮಾಣಿ ದಾರುಲ್ ಇರ್ಶಾದ್ ಖತೀಬ್ ನಝೀರ್ ಅಮ್ಜದಿ ಸರಳಿಕಟ್ಟೆ, ಕೆಸಿಎಫ್ ರಿಯಾದ್ ಝೋನ್ ಚೆಯರ್ಮೆನ್ ಮುಸ್ತಫಾ ಸಅದಿ ಸೂರಿಕುಮೇರು, ಡ್ರೈವರ್ ಹಮೀದ್ ಮಾಣಿ, ಸಾಬಿತ್ ಮಾಣಿ, ಹಂಝ ಸೂರಿಕುಮೇರು, ಫತ್ತಾಹ್ ಮಾಣಿ, ಲತೀಫ್ ಮಾಣಿ, ಅಬ್ದುಲ್ ರಝಾಕ್ ಕೊಡಾಜೆ ಮೊದಲಾದವರು ಉಪಸ್ಥಿತರಿದ್ದರು. ಬ್ರಾಂಚ್ ಕಾರ್ಯದರ್ಶಿ ಸಲೀಂ ಮಾಣಿ ಕಾರ್ಯಕ್ರಮ ನಿರೂಪಿಸಿ, ಅಬ್ದುಲ್ ರಝಾಕ್ ಮದನಿ ಕಾಮಿಲ್ ಸಖಾಫಿ ಅಲ್ ಫುರ್ಖಾನಿ ಮಂಜನಾಡಿ ಧನ್ಯವಾದಗೈದರು.

Also Read  ಕಡಬ:‌ ವರ್ತಕರಿಗೆ ಉಚಿತ ಕೋವಿಡ್‌ ಟೆಸ್ಟ್

error: Content is protected !!
Scroll to Top