ಮಹಿಳೆಗೆ ನಾಡಕೋವಿಯಿಂದ ಗುಂಡು ಹಾರಿಸಿದ ಪ್ರಕರಣ ➤ ಆರೋಪಿಗೆ ನ್ಯಾಯಾಂಗ ಬಂಧನ

(ನ್ಯೂಸ್ ಕಡಬ) newskadaba.com ಪುತ್ತೂರು, ನ. 23. ಇಲ್ಲಿನ ಶಾಂತಿಗೋಡು ಗ್ರಾಮದ ವೀರಮಂಗಲ ಕೊಯಕುಡೆ ಎಂಬಲ್ಲಿ ಜಮೀನು ತಕರಾರಿ ವಿಷಯವಾಗಿ ವ್ಯಕ್ತಿಯೋರ್ವ ಮಹಿಳೆಗೆ ನಾಡಕೋವಿಯಿಂದ ಗುಂಡು ಹಾರಿಸಿದ ಪ್ರಕರಣಕ್ಕೆ ಸಂಬಂಧಿಸಿ ಬಂಧಿತ ಆರೋಪಿ ದೇವಪ್ಪ ಗೌಡರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ದೇವಪ್ಪ ಗೌಡ ಅವರು ನ.21 ರಂದು ಜಾಗದ ತಕರಾರಿನ ವಿಚಾರದಲ್ಲಿ ವೈಷಮ್ಯ ಉಂಟಾಗಿ ಬಂದೂಕಿನಿಂದ ತನ್ನ ಸಹೋದರ ಬಾಬು ಗೌಡ ಅವರ ಪತ್ನಿ ಧರ್ನಮ್ಮ ಎಂನವರಿಗರ ಗುರಿಯಿಟ್ಟು ಗುಂಡು ಹಾರಿಸಿದ್ದರು. ಈ ವೇಳೆ ಧರ್ನಮ್ಮ ಅವರು ಬಾಗಿದ ಪರಿಣಾಮ ಗುಂಡು ಅವರ ಪಕ್ಕದಿಂದಲೇ ಹಾರಿ ಹೋದ ಪರಿಣಾಮ ಅವರು ಅಪಾಯದಿಂದ ಪಾರಾಗಿದ್ದರು. ಈ ಕುರಿತು ಧರ್ನಮ್ಮ ಅವರು ನೀಡಿದ ದೂರಿನಂತೆ ಆರೋಪಿ ವಿರುದ್ಧ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಘಟನೆಯ ಆರೋಪಿ ದೇವಪ್ಪ ಗೌಡ ತಲಮರೆಸಿಕೊಂಡಿದ್ದು, ಬಳಿಕ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದ ವೇಳೆ ನ.22ರಂದು ಆರೋಪಿ ದೇವಪ್ಪ ಗೌಡ ಪುತ್ತೂರು ನಗರ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದರು. ಪೊಲೀಸರು ಆರೋಪಿಯನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಇದೀಗ ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

Also Read  ಅಡ್ಯನಡ್ಕ: 'ಆರಾಧನೆ' ಕವನ ಸಂಕಲನ ಬಿಡುಗಡೆ

error: Content is protected !!
Scroll to Top