ಎಟಿಎಂ ಕಳ್ಳರಿಂದ ಮಲಗಿದ್ದ ಸೆಕ್ಯುರಿಟಿ ಗಾರ್ಡ್ ನ ಬರ್ಬರ ಕೊಲೆ..!

(ನ್ಯೂಸ್ ಕಡಬ) newskadaba.com ಬಳ್ಳಾರಿ, ನ. 23. ಎಟಿಎಂ ದರೋಡಗೆ ಬಂದ ಹಂತಕರು ಮಲಗಿದ್ದ ಸೆಕ್ಯುರಿಟಿ ಗಾರ್ಡ್ ನ್ನು ಬರ್ಬರವಾಗಿ ಹತ್ಯೆಗೈದ ಘಟನೆ ಪ್ರತಿಷ್ಠಿತ ಐಸಿಐಸಿಐ ಬ್ಯಾಂಕ್ ನಲ್ಲಿ ನಡೆದಿದೆ.


ಕೊಲೆಯಾದವರನ್ನು ಬಸವರಾಜ್ ಎಂದು ಗುರುತಿಸಲಾಗಿದೆ. ರಾತ್ರಿಯಲ್ಲಿ ಎಟಿಎಂ ಕಳ್ಳತನಕ್ಕೆ ಬಂದಿದ್ದ ದುಷ್ಕರ್ಮಿಗಳು ಈ ಕೃತ್ಯವೆಸಗಿದ್ದಾರೆ. ಎಟಿಎಂ ಮತ್ತು ಐಸಿಐಸಿಐ ಬ್ಯಾಂಕ್ ಅಕ್ಕಪಕ್ಕದಲ್ಲಿಯೇ ಇದ್ದು, ದರೋಡೆಗೆ ಬಂದ್ರೋ ಇಲ್ಲ ಖಾಸಗಿ ವಿಷಯಕ್ಕೆ ಕೊಲೆ ಮಾಡಿದರೋ ಎಂಬುವುದು ಇನ್ನಷ್ಟೇ ತಿಳಿದುಬರಬೇಕಿದೆ. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೈದುಲ್ ಅಡಾವತ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Also Read  ಆಸ್ಪತ್ರೆಗಳಲ್ಲಿ `ಮರಣ ಕಾರಣ' ವೈದ್ಯಕೀಯ ಪ್ರಮಾಣಪತ್ರ ನೋಂದಣಿ ಕಡ್ಡಾಯ ➤ ರಾಜ್ಯ ಸರ್ಕಾರ ಸುತ್ತೋಲೆ

 

error: Content is protected !!
Scroll to Top