ಮಗಳಿಗೆ ನಿರಂತರ ಲೈಂಗಿಕ ದೌರ್ಜನ್ಯವೆಸಗುತ್ತಿದ್ದ ಕಾಮುಕ ತಂದೆ ➤ ಕೊಚ್ಚಿಕೊಂದ ಮಗಳ ಸ್ನೇಹಿತರು..!

(ನ್ಯೂಸ್ ಕಡಬ) newskadaba.com ಬೆಂಗಳೂರು, ನ. 23. ಮಗಳ ಸ್ನೇಹಿತರೇ ಸೇರಿ ಆಕೆಯ ತಂದೆಯನ್ನು ಕೊಚ್ಚಿ ಬರ್ಬರವಾಗಿ ಹತ್ಯೆ ನಡೆಸಿದ ಘಟನೆ ಇಬ್ಬರು ಪುತ್ರಿಯರ ಮುಂದೆಯೇ ಯಲಹಂಕ ನ್ಯೂಟೌನ್ ಪೊಲೀಸ್ ಠಾಣಾ ವ್ಯಾಪ್ತಿಯ ಮೀರ್ ಸಾಗರ್ ರಸ್ತೆಯಲ್ಲಿ ನಡೆದಿದೆ.


ಹತ್ಯೆಗೀಡಾದವರನ್ನು ದೀಪಕ್ ಕುಮಾರ್ ಸಿಂಗ್ ಎಂದು ಗುರುತಿಸಲಾಗಿದೆ. ಭಾನುವಾರ ತಡರಾತ್ರಿ ದೀಪಕ್ ಕುಮಾರ್ ನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಬಿಹಾರ ಮೂಲದವನಾಗಿದ್ದ ದೀಪಕ್ ಕುಮಾರ್ ಜಿಕೆವಿಕೆನಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದನು. ಈತ ತನ್ನ ಇಬ್ಬರು ಹೆಣ್ಣು ಮಕ್ಕಳ ಜೊತೆಗೆ ವಾಸವಿದ್ದು ತನ್ನ ಓರ್ವ ಮಗಳಿಗೆ ಕಳೆದ 1 ವರ್ಷಗಳಿಂದ ನಿರಂತರವಾಗಿ ಲೈಂಗಿಕ ದೌರ್ಜನ್ಯವೆಸಗುತ್ತಿದ್ದ ಎನ್ನಲಾಗಿದೆ. ತಂದೆ ತನಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾನೆ ಎಂದು ಮಗಳು ಸಾಕಷ್ಟು ಬಾರಿ ತನ್ನ ತಾಯಿಯ ಬಳಿಯಲ್ಲಿ ಹೇಳಿಕೊಂಡರೂ ಯಾವುದೇ ಪ್ರಯೋಜನವಾಗದ ಹಿನ್ನೆಲೆ ನೊಂದ ಆಕೆ, ತನ್ನ ಸ್ನೇಹಿತರ ಬಳಿಯಲ್ಲಿ ಈ ವಿಚಾರ ಹೇಳಿಕೊಂಡಿದ್ದಾಳೆ. ವಿಚಾರ ತಿಳಿದ ಸ್ನೇಹಿತರು ಆಕ್ರೋಶಗೊಂಡಿದ್ದು, ತಡರಾತ್ರಿ ಮನೆಗೆ ನುಗ್ಗಿ ದೀಪಕ್ ಕುಮಾರ್ ನನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾರೆನ್ನಲಾಗಿದೆ.

Also Read  ಜಮ್ಮು ಕಾಶ್ಮೀರದಲ್ಲಿ  2 ಪ್ರತ್ಯೇಕ ಎನ್ ಕೌಂಟರ್ ನಡೆಸಿದ ಭಾರತೀಯ ಭದ್ರತಾ ಪಡೆ   ಮೂರು ಭಯೋತ್ಪಾದಕರ ಹತ್ಯೆ

error: Content is protected !!
Scroll to Top