ಯಡಿಯೂರಪ್ಪರಿದ್ದ ಕಾರು ನಿಲ್ಲಿಸದೇ ಇದ್ದುದಕ್ಕೆ ಆಕ್ರೋಶ ► ಬಿಜೆಪಿಯ ಪರಿವರ್ತನಾ ಯಾತ್ರೆಯ ವಾಹನಕ್ಕೆ ಕಲ್ಲು ತೂರಾಟ

(ನ್ಯೂಸ್ ಕಡಬ) newskadaba.com ತುಮಕೂರು, ನ,03. ತುಮಕೂರು ಜಿಲ್ಲೆ ತುರುವೇಕೆರೆ ತಾಲ್ಲೂಕಿನ ಬಾಣಸಂದ್ರದಲ್ಲಿ ಬಿಜೆಪಿ ಪರಿವರ್ತನಾ ಯಾತ್ರೆಯ ವಾಹನದ ಮೇಲೆ ಮೇಲೆ ಶುಕ್ರವಾರದಂದು ಕಲ್ಲು ತೂರಲಾಗಿದೆ.

ಬಿಜೆಪಿ ಅತೃಪ್ತರು ಹಾಗೂ ಜೆಡಿಎಸ್ ಬೆಂಬಲಿಗರು ಕಲ್ಲು ತೂರಾಟ ನಡೆಸಿದ್ದಾರೆ ಎನ್ನಲಾಗಿದೆ. ಕಲ್ಲೇಟಿನಿಂದ ಪರಿವರ್ತನಾ ಯಾತ್ರೆ ವಾಹನದ ಗಾಜು ಪುಡಿಯಾಗಿದೆ.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರಿದ್ದ ಕಾರು ಬಾಣಸಂದ್ರ ಬಳಿ ನಿಲ್ಲಿಸದೇ ಇರುವುದರಿಂದ ಆಕ್ರೋಶಗೊಂಡ ಪಕ್ಷದ ಕಾರ್ಯಕರ್ತರು ಕಲ್ಲು ತೂರಿದ್ದಾರೆ ಎನ್ನಲಾಗಿದೆ. ಬಿಜೆಪಿಯ ಉಚ್ಛಾಟಿತ ಮುಖಂಡ ಚೌಧರಿ ನಾಗೇಶ್ ಬೆಂಬಲಿಗರು ಕಲ್ಲು ತೂರಾಟ ನಡೆಸಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ.

Also Read  ಐಪಿಎಸ್‌ ಅಧಿಕಾರಿ ರೂಪಾಗೆ ಕೋರ್ಟ್‌ ನೋಟಿಸ್‌

error: Content is protected !!
Scroll to Top