ಕಚ್ಚಿದ ಹಾವನ್ನು ಹಿಡಿದುಕೊಂಡೇ ಆಸ್ಪತ್ರೆಗೆ ದಾಖಲಾದ ವ್ಯಕ್ತಿ..!

(ನ್ಯೂಸ್ ಕಡಬ) newskadaba.com ಭಟ್ಕಳ, ನ. 23. ಹೆಬ್ಬಾವು ಕಚ್ಚಿದರೂ ಹೆದರದ ವ್ಯಕ್ತಿಯೋರ್ವ ಹಾವನ್ನುಹೊತ್ತುಕೊಂಡೇ ಆಸ್ಪತ್ರೆಗೆ ದಾಖಲಾದ ಆಶ್ಚರ್ಯಕರ ಘಟನೆ ಭಟ್ಕಳದಲ್ಲಿ ಸೋಮವಾರದಂದು ರಾತ್ರಿ ನಡೆದಿದೆ.

ಹೆಬ್ಬಾವು ಕಡಿತಕ್ಕೊಳಗಾದ ವ್ಯಕ್ತಿಯನ್ನು ಮಣ್ಕುಳಿ ಸೀತಾರಾಮ ನಾರಾಯಣ ನಾಯ್ಕ ಎಂದು ಗುರುತಿಸಲಾಗಿದೆ. ಕಳೆದೊಂದು ವಾರದಿಂದ ಕೆಲದಿನಗಳಿಂದ ಮಳೆ ಸುರಿಯುತ್ತಿದ್ದು, ರೈಲ್ವೆ ನಿಲ್ದಾಣ ಸಮೀಪದಲ್ಲೇ ಇರುವ ಮನೆಯ ಪಕ್ಕದಲ್ಲಿ ಹೆಬ್ಬಾವೊಂದು ಪ್ರತ್ಯಕ್ಷವಾಗಿದ್ದು, ರಸ್ತೆಯಲ್ಲಿ ಮತ್ಯಾರಿಗಾದರೂ ಕಚ್ಚಿದರೆ ಅಪಾಯವಾಗುತ್ತದೆ ಎಂದು ತಿಳಿದ ಸೀತಾರಾಮ ನಾಯ್ಕ ತನ್ನ ಕೆಲವು ಸ್ನೇಹಿತರ ಸಹಾಯದಿಂದ ಹಾವನ್ನು ಸೆರೆಹಿಡಿಯಲು ಪ್ರಯತ್ನಿಸಿದ್ದಾರೆ. ಈ ವೇಳೆ ಅವರಿಗೆ ಹಾವು ಕಚ್ಚಿದ್ದು, ಇದರಿಂದ ವಿಚಲಿತಗೊಳ್ಳದ ಅವರು ಆರೇಳು ಅಡಿ ಉದ್ದದ ಹೆಬ್ಬಾವವನ್ನು ತಮ್ಮ ಸ್ನೇಹಿತರ ಸಹಾಯದೊಂದಿಗೆ ಹಿಡಿದುಕೊಂಡೇ ಆಸ್ಪತ್ರೆಗೆ ಬಂದು ಚಿಕಿತ್ಸೆಗೆ ದಾಖಲಾಗಿದ್ದಾರೆ.

Also Read  ಕಡಬ: ಕೋಟೆಸಾರು ಹೊಳೆಯಲ್ಲಿ ಅಪರಿಚಿತ ಮಹಿಳೆಯ ಮೃತದೇಹ ಪತ್ತೆ ➤ ಸ್ವತಃ ನೀರಿಗಿಳಿದು ಮೃತದೇಹ ಮೇಲಕ್ಕೆತ್ತಿದ ಕಡಬ ಎಸ್ಐ ರುಕ್ಮನಾಯ್ಕ್

error: Content is protected !!
Scroll to Top