ಕಡಬ: ವರ್ಷ ಕಳೆದರೂ ದುರಸ್ತಿ ಆಗದ ಬೀದಿದೀಪ ಹಾಗೂ ಬೀದಿನಾಯಿಗಳ ಅಟ್ಟಹಾಸಕ್ಕೆ ಸಿಗದ ಪರಿಹಾರ ➤ ಸೂಕ್ತ ಕ್ರಮಕ್ಕೆ ಎಸ್ಡಿಪಿಐ ಆಗ್ರಹ

(ನ್ಯೂಸ್ ಕಡಬ) newskadaba.com ಕಡಬ, ನ. 23. ಹಿಂದಿನ ಗ್ರಾಮ ಪಂಚಾಯತ್ ಅವಧಿಯಲ್ಲಿ ಅಳವಡಿಸಲಾದ ಬೀದಿ ದೀಪ ಇನ್ನೂ ಕೂಡಾ ಉರಿಯುವ ಭಾಗ್ಯ ಕಂಡಿಲ್ಲ. ಪಟ್ಟಣ ಪಂಚಾಯತ್ ವ್ಯಾಪ್ತಿಯ ಪಿಜಕ್ಕಳ, ಮುಳಿಮಜಲು, ಹಳೆಸ್ಟೇಶನ್ ಹಾಗೂ ಕೊರಂದೂರು ಪ್ರದೇಶಗಳಲ್ಲಿ ಈ ಸಮಸ್ಯೆಯು ಕಳೆದ ಒಂದು ವರ್ಷದಿಂದ ಕಾಡತೊಡಗಿದೆ. ಇನ್ನೂ ಕೂಡ ಮುಕ್ತಿ ಕಂಡಿಲ್ಲ. ಈ ಹಿನ್ನೆಲೆ ಸಂಬಂಧಪಟ್ಟವರು ಇದರ ಬಗ್ಗೆ ಗಮನ ಹರಿಸಿ ಈ ಸಮಸ್ಯೆಗೆ ಪರಿಹಾರ ದೊರಕಿಸಿ ಕೊಡಬೇಕು ಹಾಗೂ ಬೀದಿ ನಾಯಿಗಳ ಕಾಟದಿಂದ ಆಗುವ ತೊಂದರೆಗಳಿಗೆ ಸೂಕ್ತ ಪರಿಹಾರ ನೀಡಬೇಕೆಂದು ಎಸ್ಡಿಪಿಐ ಕಡಬ ಬೂತ್ ಸಮಿತಿ ಅಧ್ಯಕ್ಷರಾದ ಕಮರುದ್ದಿನ್ ಕಡಬ ಅಗ್ರಹಿಸಿದ್ದಾರೆ.

Also Read  ಪರಿಸರ ಮಾಲಿನ್ಯತಡೆಗಟ್ಟಲುಯುವಜನತೆ ಶಿಕ್ಷಣ ಸಂಸ್ಥೆಗಳ ಜೊತೆಗೆ ಸಂಶೋದನೆಯಲ್ಲಿಕೈಜೋಡಿಸಬೇಕು ➤ ಡಾ. ಎನ್ ವಿನಯ ಹೆಗ್ಡೆ

 

 

error: Content is protected !!
Scroll to Top