ಮಳೆಯಿಂದ ಮನೆ ಕಳಕೊಂಡವರಿಗೆ ಐದು ಲಕ್ಷ ರೂ. ಪರಿಹಾರ ➤ ಸಿಎಂ ಬೊಮ್ಮಾಯಿ ಘೋಷಣೆ

(ನ್ಯೂಸ್ ಕಡಬ) newskadaba.com ಚಿಕ್ಕಬಳ್ಳಾಪುರ, ನ. 22. ಕಳೆದ ಸುಮಾರು ದಿನಗಳಿಂದ ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಅಪಾರ ಪ್ರಾಣಹಾನಿ ಉಂಟಾಗಿದ್ದು, ನೀರು ನುಗ್ಗಿರುವ ಮನೆಗಳಿಗೆ 10 ಸಾವಿರ ಪರಿಹಾರಕ್ಕೆ ಸೂಚನೆ ಕೊಡಲಾಗಿದ್ದು, ಮಳೆಯಿಂದ ಮನೆ ಭಾಗಶಃ ಬಿದಿದ್ರೆ 3 ಲಕ್ಷ ರೂ, ಮಳೆಯಿಂದಾಗಿ ಮನೆ ಸಂಪೂರ್ಣ ಬಿದಿದ್ರೆ 5 ಲಕ್ಷ ರೂ. ಪರಿಹಾರ ನೀಡಲಾಗುವುದು ಎಂದು ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ.


ಇದೀಗ ಜಿಲ್ಲೆಯಲ್ಲಿ ಒಟ್ಟು 24 ಮನೆಗಳು ಸಂಪೂರ್ಣ ಕುಸಿತವಾಗಿರುವ ಕುರಿತು ಚಿಕ್ಕಬಳ್ಳಾಪುರ ಡಿಸಿ ನೀಡಿದ ವರದಿಯನ್ನಾಧರಿಸಿ ಪರಿಹಾರ ನೀಡುವಂತೆ ಸೂಚನೆ ನೀಡಿದ್ದೇನೆ ಎಂದು ಚಿಕ್ಕಬಳ್ಳಾಪುರದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ.

Also Read  ಸುಳ್ಯ : ಲಾಕ್ ಡೌನ್ ಮಧ್ಯೆಯೂ ಹೆಚ್ಚಿದ ಜನಸಂದಣಿ

error: Content is protected !!
Scroll to Top