ಅನ್ಯಕೋಮಿನ ಜೋಡಿಯ ವಿವಾಹ ಪ್ರಕರಣ ➤ ಯುವತಿಯ ಮನವೊಲಿಸಲು ಮನೆಗೆ ಭೇಟಿ ನೀಡಿದ ಸ್ವಾಮೀಜಿಯ ವಿಫಲಯತ್ನ..!

(ನ್ಯೂಸ್ ಕಡಬ) newskadaba.com‌ ಮಂಗಳೂರು, ನ. 22. ಇಲ್ಲಿನ ಖಾಸಗಿ ಮೆಡಿಕಲ್ ಕಾಲೇಜೊಂದರ ಜೋಡಿಗಳು ಕಳೆದ ಮೂರು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದು, ಮನೆಯವರನ್ನೆಲ್ಲ ಒಪ್ಪಿಸಿ ಶಾಸ್ತ್ರಬದ್ಧವಾಗಿ ಮದುವೆಯಾಗುತ್ತಿದ್ದಾರೆ. ಕೇರಳದ ಕಣ್ಣೂರಿನಲ್ಲೇ ನ. 29ರಂದು ಇಬ್ಬರ ವಿವಾಹಕ್ಕೆ ಡೇಟ್ ಫಿಕ್ಸ್ ಕೂಡ ಆಗಿದ್ದು, ಈ ಜೋಡಿಯ ವಿವಾಹಕ್ಕೆ ಲವ್ ಜಿಹಾದ್ ಆರೋಪ ಕೂಡಾ ಕೇಳಿಬಂದಿತ್ತು.

ಈ ಮದುವೆಯನ್ನು ತಡೆಯಲು ಹಿಂದೂ ಸಂಘಟನೆಗಳು ಮತ್ತು ವಜ್ರದೇಹಿ ರಾಜಶೇಖರಾನಂದ ಸ್ವಾಮೀಜಿಗಳು, ಆಕೆಯ ಮನೆಗೆ ಭೇಟಿ ನೀಡಿ ಮನವೊಲಿಸಲು ಪ್ರಯತ್ನಿಸಿದ್ದು, ಆದರೆ ಯುವತಿಯು ತನ್ನ ನಿರ್ಧಾರವನ್ನು ಮಾತ್ರ ಬದಲಿಸಲಿಲ್ಲ ಎಂದು‌ ತಿಳಿದುಬಂದಿದೆ. ಸ್ವಾಮೀಜಿಗಳು ಸದ್ಯ ಮದುವೆಯನ್ನು ಮುಂದೂಡಿ ಈ ಕುರಿತು ಯೋಚಿಸುವಂತೆ ಸಲಹೆ ನೀಡಿದ್ದರಾದರೂ ಯುವತಿ, ಸ್ವಾಮೀಜಿಯ ಮಾತುಗಳನ್ನು ತಳ್ಳಿ ಹಾಕಿ, ಇದು ಲವ್ ಜಿಹಾದ್ ಅಲ್ಲ, ನಾವಿಬ್ಬರೂ ಪ್ರೀತಿಸಿ ಮದುವೆಯಾಗುತ್ತಿದ್ದೇವೆ. ಮುಸ್ಲಿಂ ಯುವಕನ ಮದುವೆಯಾದರೂ ಹಿಂದೂ ಧರ್ಮದಲ್ಲೇ ಮುಂದುವರಿಯುವೆ ಎಂದು ತಿಳಿಸಿದ್ದಾರೆ.

Also Read  ಬಿದ್ದು ಸಿಕ್ಕಿದ ಪರ್ಸ್ ಹಿಂತಿರುಗಿಸಿ ಮಾನವೀಯತೆ ಮೆರೆದ ಮಹಿಮಾ ಮಾಲಕ

 

error: Content is protected !!
Scroll to Top