ಕಳ್ಳತನಗೈಯ್ಯಲು ಡಯೆಟ್ ಮಾಡಿ ತೂಕ ಇಳಿಸಿದ ಖತರ್ನಾಕ್ ಕಳ್ಳ..! ➤ ಉಂಡ ಮನೆಗೆ ಕನ್ನ ಹಾಕಿದ

(ನ್ಯೂಸ್ ಕಡಬ) newskadaba.com ಅಹ್ಮದಾಬಾದ್‌, ನ. 22. ಕಳ್ಳನೋರ್ವ ಕಳ್ಳತನಕ್ಕಾಗಿಯೇ ಡಯೆಟ್ ಮಾಡಿದ ಘಟನೆ ಗುಜರಾತ್‌ನ ಅಹ್ಮದಾ ಬಾದ್‌ನಿಂದ ವರದಿಯಾಗಿದೆ.


ಡಯೆಟ್‌ ಮಾಡಿದ ಈತನ ಹೆಸರು ಮೋತಿಸಿಂಗ್‌ ಚೌಹಾನ್‌. ಈತ ಅಹ್ಮದಾಬಾದ್‌ನ ಬೋಪಾಲ್‌ ಪ್ರಾಂತ್ಯದಲ್ಲಿನ ವಾಸವಾಗಿದ್ದ ಮೋಹಿತ್‌ ಮೊರಾಡಿಯಾ ಎಂಬವರ ಮನೆಯಲ್ಲಿ ಎರಡು ವರ್ಷದ ಹಿಂದೆ ಕೆಲಸದಾಳಾಗಿದ್ದು, ಆತನಿಗೆ ಆ ಮನೆಯವರು ಬೆಲೆಬಾಳುವ ವಸ್ತುಗಳನ್ನು ಎಲ್ಲಿ ಬಚ್ಚಿಡುತ್ತಾರೆ ಎಂದು ಗೊತ್ತಿತ್ತು. ಆ ಮನೆಗೆ ಕನ್ನ ಹಾಕಲು ನಿರ್ಧರಿಸಿದ್ದರೂ, ಮನೆಯ ಎರಡೂ ಬಾಗಿಲಿನ ಸಮೀಪ ಸಿಸಿಟಿವಿ ಇದ್ದಿದ್ದರಿಂದ ಧೈರ್ಯ ಮಾಡದ ಆತ ಅಡುಗೆ ಮನೆಯ ಕಿಟಕಿಯಿಂದ ಒಳತೂರಿ ಕಳ್ಳತನ ಮಾಡಲು ನಿಶ್ಚಯಿಸಿದ್ದಾನೆ ಎನ್ನಲಾಗಿದೆ. ಆದರೆ, ಆತನ ದೇಹ ಕಿಟಕಿಯ ಮೂಲಕ ಒಳಗೆ ಹೊಕ್ಕಲ್ಲ ಎಂಬುದನ್ನು ತಿಳಿದ ಆತ, ಕಳೆದ ಮೂರು ತಿಂಗಳಿಂದ ದಿನಕ್ಕೆ ಡಯೆಟ್ ಮಾಡಿ 75 ಕೆಜಿಯಯ ದೇಹದ ತೂಕವನ್ನು 65 ಕೆಜಿಗೆ ಇಳಿಸಿ, ಆನಂತರ ಆ ಮನೆಯೊಳಗೆ ತೂರಿ 37 ಲಕ್ಷ ರೂ. ಮೌಲ್ಯದ ಸಾಮಗ್ರಿಗಳನ್ನು ಕದ್ದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

Also Read  ನಿಮ್ಮ ಮೊಬೈಲ್ ಸಂಖ್ಯೆಗೆ ಆಧಾರ್ ಜೋಡಣೆ ಮಾಡಿಲ್ಲವೇ...? ► ಮನೆಯಲ್ಲಿಯೇ ಕುಳಿತು ಮಾಡಬಹುದು ಆಧಾರ್ ಜೋಡಣೆ

error: Content is protected !!
Scroll to Top