ನೆಲ್ಯಾಡಿ: ಯುನೈಟೆಡ್ ಕ್ರಿಸ್ಮಸ್ ಆಚರಣಾ ಸಮಿತಿಯ ಪ್ರಥಮ ಸಭೆ

(ನ್ಯೂಸ್ ಕಡಬ) newskadaba.com ನೆಲ್ಯಾಡಿ, ನ. 21. ಯುನೈಟೆಡ್ ಕ್ರಿಸ್ಮಸ್ ಆಚರಣಾ ಸಮಿತಿ ನೆಲ್ಯಾಡಿ ಇದರ 2021ರ ಯುನೈಟೆಡ್ ಕ್ರಿಸ್ಮಸ್ ಆಚರಣೆಯ ಪ್ರಥಮ ಸಭೆಯು ನ.21 ಆದಿತ್ಯವಾರದಂದು ನೆಲ್ಯಾಡಿ ಸೈಂಟ್ ಆಲ್ಫೋನ್ಸಾ ಚರ್ಚ್ ಸಭಾಭವನದಲ್ಲಿ ಫಾ.ಸಿಬಿ ತೋಮಸ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು.

ಇದರ ನೂತನ ಅಧ್ಯಕ್ಷರಾಗಿ ಫಾ.ಸಿಬಿ ತೋಮಸ್, ಉಪಾಧ್ಯಕ್ಷರಾಗಿ ಫಾ.ಸತ್ಯನ್ ಒಐಸಿ, ಸಂಚಾಲಕರಾಗಿ ಫಾ. ಹೆನಿ ಜೇಕಬ್, ಕಾರ್ಯದರ್ಶಿಯಾಗಿ ಪ್ರಶಾಂತ್ ವರ್ಗೀಸ್, ಕೋಶಾಧಿಕಾರಿಯಾಗಿ ಅರುಣ್ ಅವರನ್ನು ನಾಮ ನಿರ್ದೇಶನ ಮಾಡಲಾಯಿತು. 2021 ರ ಕ್ರಿಸ್ಮಸ್ ಆಚರಣೆಯನ್ನು ಡಿ.19ರ ಆದಿತ್ಯವಾರ ನಡೆಸುವುದೆಂದು ತೀರ್ಮಾನಿಸಲಾಯಿತು.

Also Read  ಸೆ: 18ರಂದು ಕಡಬದಲ್ಲಿ ಲೋಕಾಯುಕ್ತ ಅಹವಾಲು ಸ್ವೀಕಾರ

error: Content is protected !!
Scroll to Top