ಡಿ. 01ರಿಂದ ಕುಕ್ಕೇ ಸುಬ್ರಹ್ಮಣ್ಯ ಷಷ್ಟೀ ಮಹೋತ್ಸವ ಹಿನ್ನೆಲೆ ➤ ಸಂಪ್ರದಾಯದಂತೆ ಬೆತ್ತ ಸಂಗ್ರಹಕ್ಕೆ ಕಾಡಿಗೆ ತೆರಳಿದ ಮಲೆಕುಡಿಯರು

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ನ. 20. ಡಿ. 01 ಬುಧವಾರದಿಂದ ಕೊಪ್ಪರಿಗೆ ಏರುವುದರ ಮೂಲಕ ಕುಕ್ಕೆ ಸುಬ್ರಹ್ಮಣ್ಯ ಜಾತ್ರೆ ಆರಂಭಗೊಂಡು ಡಿ. 03-ಲಕ್ಷದೀಪೋತ್ಸವ, ಡಿ.07- ಚೌತಿ ಹೂವಿನ ತೇರಿನ ಉತ್ಸವ, ಡಿ.08-ಪಂಚಮಿ ರಥೋತ್ಸವ,
ಡಿ.09-ಬೆಳಗ್ಗೆ ಚಂಪಾಷಷ್ಠಿ ಬ್ರಹ್ಮರಥೋತ್ಸವ, ಡಿ.10ರಂದು ಅವಭ್ರಥೋತ್ಸವ ಮತ್ತು ನೌಕಾವಿಹಾರ ಹಾಗೂ ಡಿ. 15ರಂದು ಕೊಪ್ಪರಿಗೆ ಇಳಿಯುವುದರ ಮೂಲಕ ಸಂಪನ್ನಗೊಳ್ಳಲಿದೆ. ಅಲ್ಲದೇ ಈ ದಿನ ರಾತ್ರಿ ನೀರಿನಲ್ಲಿ ಬಂಡಿ ಉತ್ಸವ ಹಾಗೂ ಪುರುಷರಾಯ, ಹೊಸಳಿಗಮ್ಮ ಹಾಗೂ ಪರಿವಾರ ದೈವಗಳ ನಡಾವಳಿಯು ನಡೆಯಲಿದೆ.

ಮಾರ್ಗಶಿರ ಶುದ್ಧ ಪೌರ್ಣಮಿಯಂದು ಸಹಸ್ರ ನಾಮಾರ್ಚನೆಯ ಬಳಿಕ ಅರ್ಚಕರು ಶುಭ ಮುಹೂರ್ತದಲ್ಲಿ ಬ್ರಹ್ಮರಥ ನಿರ್ಮಾಣಕ್ಕೆ ಚಾಲನೆ ನೀಡಿ, ಬಳಿಕ ಮಲೆಕುಡಿಯ ಜನಾಂಗದವರು ವೀಳ್ಯ ಸ್ವೀಕರಿಸಿ ಕಾಡಿಗೆ ತೆರಳುತ್ತಾರೆ. ಸುಮಾರು ನಾಲ್ಕು ದಿನಗಳ ಕಾಲ ಕಾಡಿನಲ್ಲಿಯೇ ಇದ್ದು ಬೆತ್ತಗಳನ್ನು ಹುಡುಕಿ ಸುಮಾರು ಹದಿನೈದು ಇಪ್ಪತ್ತು ಜನರ ತಂಡ ಬೆತ್ತಗಳನ್ನು ಸಂಗ್ರಹಿಸಿ ಕುಕ್ಕೆಗೆ ತಂದು ರಥವನ್ನು ಕಟ್ಟಿ ತಮ್ಮ ಕೈ ಚಳಕದ ಮೂಲಕ ವಿಶೇಷವಾಗಿ ರಥವನ್ನು ತಯಾರಿಸುತ್ತಾರೆ.

Also Read  ಇನ್ಸ್ ಪೆಕ್ಟರ್ ವಿರುದ್ಧ ಸುಳ್ಳು ಆರೋಪ ➤ ಹೆಡ್ ಕಾನ್ಸ್ ಟೇಬಲ್ ಅಮಾನತು

error: Content is protected !!
Scroll to Top