(ನ್ಯೂಸ್ ಕಡಬ) newskadaba.com ಬಂಟ್ವಾಳ, ನ. 20. ಉರುಳಿಗೆ ಬಿದ್ದಿದ್ದ ಚಿರತೆಯೊಂದನ್ನು ಅರಣ್ಯ ಇಲಾಖೆ ಸಿಬ್ಬಂದಿಗಳು ಸ್ಥಳೀಯರ ಸಹಕಾರದೊಂದಿಗೆ ರಕ್ಷಿಸುವಲ್ಲಿ ಯಶಸ್ವಿಯಾದ ಘಟನೆ ತಾಲೂಕಿನ ಮಂಚಿ ಗ್ರಾಮದ ಹೆಗಡೆಗುಳಿ ಎಂಬಲ್ಲಿ ಶುಕ್ರವಾರದಂದು ತಡರಾತ್ರಿ ನಡೆದಿದೆ.
ಸುತ್ತಮುತ್ತಲು ಮನೆಗಳೇ ಇರುವ ಜಾಗದಲ್ಲಿ ಚಿರತೆಯೊಂದು ಉರುಳಿಗೆ ಸಿಲುಕಿದ ಮಾಹಿತಿ ರಾತ್ರಿ ಸುಮಾರು 8 ಗಂಟೆಯ ವೇಳೆ ಸ್ಥಳೀಯರ ಮೂಲಕ ಅರಿತ ಅಧಿಕಾರಿಗಳು ಕೂಡಲೇ ಕಾರ್ಯಾಚರಣೆಗಿಳಿದು ಸುಮಾರು 4 ತಾಸುಗಳ ಪರಿಶ್ರಮದ ಬಳಿಕ ಚಿರತೆಯ ಪ್ರಜ್ಞೆ ತಪ್ಪಿಸಿ ಕೊಂಡೊಯ್ಯುವಲ್ಲಿ ಯಶಸ್ವಿಯಾದರು. ಸುಮಾರು 60 ಕೆ.ಜಿ. ತೂಕದಷ್ಟಿರುವ ಈ ಚಿರತೆಗೆ ಮಂಗಳೂರಿನಿಂದ ಯಶಸ್ವಿ ವೈದ್ಯರ ತಂಡ ಮತ್ತು ಬರುವ ಇಂಜೆಕ್ಷನ್ ಕೊಟ್ಟ ಬಳಿಕ ಸುಮಾರು 15 ನಿಮಿಷದ ಬಳಿಕ ಅಮಲಿನಲ್ಲಿ ಚಿರತೆ ಮಲಗಿತು. ಬೋನಿನಲ್ಲಿ ಹಾಕಿ ಪಿಕಪ್ ನಲ್ಲಿ ತಂದು ವಲಯ ಕಚೇರಿಗೆ ತರಲಾಯಿತು ಎಂದು ತಿಳಿಸಿದ್ದಾರೆ.