ಕೊಕ್ಕಡ: ಅಕ್ರಮ ಗೋಸಾಗಾಟ ಪತ್ತೆ ಹಚ್ಚಿದ ಹಿಂಜಾವೇ ಕಾರ್ಯಕರ್ತರು ➤ ವಾಹನ ಸಹಿತ ಓರ್ವ ವಶಕ್ಕೆ

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ನ. 20. ಅಕ್ರಮ ಗೋಸಾಗಾಟವನ್ನು ಪತ್ತೆ ಹಚ್ಚಿದ ಬಜರಂಗದಳ ಕಾರ್ಯಕರ್ತರು ಪಿಕಪ್ ವಾಹನ ಸಹಿತ ಓರ್ವನನ್ನು ಪೊಲಿಸರಿಗೊಪ್ಪಿಸಿದ ಘಟನೆ ಕೊಕ್ಕಡದಲ್ಲಿ ಶನಿವಾರದಂದು ನಡೆದಿದೆ.

ಶನಿವಾರ ಬೆಳಗ್ಗೆ ಬೆಳ್ತಂಗಡಿ ತಾಲೂಕಿನ ಪಾಂಡಿಬೆಟ್ಟುವಿನಿಂದ ಕೊಕ್ಕಡದ ಮಲ್ಲಿಗೆ ಮಜಲ್ ಎಂಬಲ್ಲಿಗೆ ಪಿಕಪ್ ವಾಹನವೊಂದರಲ್ಲಿ ಎರಡು ದನಗಳನ್ನು ಸಾಗಾಟ ಮಾಡುತ್ತಿರುವ ವಿಚಾರ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರಿಗೆ ಲಭಿಸಿದೆ. ತಕ್ಷಣವೇ ಕಾರ್ಯಪ್ರವೃತ್ತರಾದ ಕಾರ್ಯಕರ್ತರು ತಿಪ್ಪೆಮಜಲು ಎಂಬಲ್ಲಿ ವಾಹನವನ್ನು ತಡೆದು ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಗೋವು ಸಹಿತ ಓರ್ವನನ್ನು ಬಂಧಿಸಿದ್ದಾರೆ.

Also Read  ಮಂಗಳೂರು: ಪುರಭವನ ಬಳಿಯಿರುವ ಮರಕ್ಕೆ ಕಿಡಿಗೇಡಿಗಳಿಂದ ಬೆಂಕಿ..! ➤ ಸ್ಥಳೀಯರಿಂದ ತೀವ್ರ ಆಕ್ರೋಶ

error: Content is protected !!
Scroll to Top