ಸುರತ್ಕಲ್ ಬೀಚ್ ಬಳಿ ಕಾರಿನಲ್ಲಿದ್ದ ಭಿನ್ನ ಕೋಮಿನ ಜೋಡಿ ಪತ್ತೆ..! ➤ ಬಜರಂಗದಳದಿಂದ ಕಾರ್ಯಾಚರಣೆ

(ನ್ಯೂಸ್ ಕಡಬ) newskadaba.com ಮಂಗಳೂರು, ನ. 19. ಕುದ್ರೋಳಿಯ ಮುಸ್ಲಿಂ ಯುವಕನೊಂದಿಗೆ ಹಿಂದೂ ಯುವತಿಯೋರ್ವಳು ಕಾರಿನಲ್ಲಿ ಪತ್ತೆಯಾದ ಘಟನೆ ಮಂಗಳೂರು ಹೊರವಲಯದ ಸುರತ್ಕಲ್ ಬೀಚ್ ನಲ್ಲಿ ಶುಕ್ರವಾರದಂದು ಸಂಜೆ ನಡೆದಿದೆ.

ಯುವಕನನ್ನು ಮೆಹಬೂಬ್ ಎಂದು ಗುರುತಿಸಲಾಗಿದೆ. ಯುವತಿಯು ಮೂಲತಃ ಹುಬ್ಬಳ್ಳಿಯವಳಾಗಿದ್ದು, ಕಂಪ್ಯೂಟರ್ ಸೈನ್ಸ್ ಓದುತ್ತಿದ್ದ ಈಕೆ ಕೃಷ್ಣಾಪುರದ ಪಿಜಿಯೊಂದರಲ್ಲಿ ವಾಸ್ತವ್ಯ ಇರುವುದಾಗಿ ಮೂಲಗಳು ತಿಳಿಸಿದೆ. ಸದ್ಯ ಯುವಕನ ಜೊತೆ ಪತ್ತೆಯಾದ ಯುವತಿಯನ್ನು ಸುರತ್ಕಲ್ ಪೋಲಿಸರ ವಶಕ್ಕೆ ಪಡೆದಿದ್ದಾರೆ. ಇಂದು ಸಂಜೆ ಸುರತ್ಕಲ್ ಬೀಚ್ ಬಳಿ ಕಾರಿನಲ್ಲಿ ಜೋಡಿಯೊಂದು ಏಕಾಂತದಲ್ಲಿದ್ದು, ಪಕ್ಕದಲ್ಲೇ ಇನ್ನೋರ್ವ ಅವರಿಗೆ ಸೆಕ್ಯುರಿಟಿಯಾಗಿದ್ದ ಎನ್ನಲಾಗಿದೆ. ಇದನ್ನು ಗಮನಿಸಿದ ಸುರತ್ಕಲ್ ಭಜರಂಗದಳದ ಕಾರ್ಯಕರ್ತರು ಮೊದಲು ಆತನನ್ನು ವಿಚಾರಿಸಿ, ನಂತರ ಜೋಡಿಗಳನ್ನು ಠಾಣೆಗೆ ಕರೆದೊಯ್ದಿದ್ದಾರೆ ಎನ್ನಲಾಗಿದೆ.

Also Read  ಈ ರೀತಿಯಲ್ಲಿ ದೀಪ ಬೆಳಗಿಸಿ ನಿಮ್ಮ ಕಷ್ಟಗಳು ಪರಿಹಾರ ಆಗುತ್ತವೆ ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಶಾಶ್ವತ ಪರಿಹಾರ ಪಡೆದುಕೊಳ್ಳಿ

error: Content is protected !!
Scroll to Top