ವಿವಾದಿತ ಕಾಯ್ದೆಯನ್ನು ವಾಪಾಸ್ ಪಡೆಯುತ್ತೇವೆ ಎಂದರೂ ಹೋರಾಟ ನಿಲ್ಲಿಸದ ರೈತರು..! ➤ ಕಾರಣವೇನು ಗೊತ್ತೇ?

(ನ್ಯೂಸ್ ಕಡಬ) newskadaba.com ದೆಹಲಿ, ನ. 19. ದೇಶದಲ್ಲಿ ಭಾರೀ ಚರ್ಚೆಗೊಳಗಾಗಿದ್ದ ಮೂರು ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯುವುದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದರಾದರೂ, ರೈತರು ತಮ್ಮ ಆಂದೋಲವನ್ನು ಮುಂದುವರಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ಭಾರತೀಯ ಕಿಸಾನ್ ಯೂನಿಯನ್ ನಾಯಕ ರಾಕೇಶ್ ಟಿಕಾಯತ್, ಪ್ರಧಾನಿ ಮೋದಿಯವರ ಹೇಳಿಕೆ ಇದೀಗ ಆರಂಭವಷ್ಟೆ. ಸರಕಾರವು ಈ ನಿರ್ಧಾರವನ್ನು ಸಂಸತ್ತಿನಲ್ಲಿ ಅಧಿಕೃತವಾಗಿ ಅಂಗೀಕರಿಸಿದ ಬಳಿಕ ಪ್ರತಿಭಟನಾ ನಿರತರಾದ ರೈತರು ತಮ್ಮ-ತಮ್ಮ ಹಳ್ಳಿಗಳಿಗೆ ವಾಪಸ್ ಆಗುತ್ತಾರೆ ಎಂದಿದ್ದಾರೆ. ರೈತರು ಬೆಳೆದ ಬೆಳೆಗಳಿಗೆ ಕನಿಷ್ಟ ಬೆಂಬಲ ಬೆಲೆಯನ್ನು ಕಾನೂನು ಬದ್ಧಗೊಳಿಸುವುದು ಸೇರಿದಂತೆ ಅನೇಕ ಸಮಸ್ಯೆಗಳು ಇನ್ನೂ ಕೂಡಾ ಉಳಿದಿವೆ. ಈ ಕುರಿತು ಪ್ರಧಾನಿ ಏನನ್ನೂ ತಿಳಿಸಿಲ್ಲ ಹಾಗಾಗಿ ಎಲ್ಲವೂ ಸ್ಪಷ್ಟವಾದ ಬಳಿಕವೇ ನಾವು ಹಳ್ಳಿಗಳಿಗೆ ತೆರಳುವುದಾಗಿ ಅವರು ತಿಳಿಸಿದ್ದಾರೆ.

Also Read  ಕನ್ನಡ ರಾಜ್ಯೋತ್ಸವ ಆಚರಣೆಗೆ ಹೊಸ ಮಾರ್ಗಸೂಚಿ ಪ್ರಕಟ

error: Content is protected !!
Scroll to Top