(ನ್ಯೂಸ್ ಕಡಬ) newskadaba.com ಮಂಗಳೂರು, ನ. 19. ಮಹಾನಗರ ಪಾಲಿಕೆ ಆರೋಗ್ಯ ಇಲಾಖೆಯ ಅಧಿಕಾರಿಗಳೆಂದು ಹೇಳಿ ಮನೆಗೆ ನುಗ್ಗಿ ಚಿನ್ನಾಭರಣ ದೋಚಿದ ಘಟನರ ಉರ್ವಸ್ಟೋರ್ ಸಮೀಪದ ದಡ್ಡಲ್ ಕಾಡ್ ಪ್ರದೇಶದಲ್ಲಿ ನಡೆದಿದೆ.
ಬೆಳಗ್ಗೆ ಮನೆಯೊಂದಕ್ಕೆ ನುಗ್ಗಿದ ಇಬ್ಬರು ವ್ಯಕ್ತಿಗಳು ತಮ್ಮನ್ನು ಮ.ನ.ಪಾ ಆರೋಗ್ಯ ಅಧಿಕಾರಿಗಳೆಂದು ಪರಿಚಯಿಸಿ, ಸ್ವಚ್ಚತೆಯ ಬಗ್ಗೆ ಪರಿಶೀಲನೆ ನಡೆಸುತ್ತೇವೆ ಎಂದು ಹೇಳಿ ಮನೆಯಲ್ಲಿದ್ದವರನ್ನು ಮನೆಯ ಹಿಂಭಾಗಕ್ಕೆ ಕರೆದುಕೊಂಡು ಹೋಗಿದ್ದಾರೆ. ಇದರಿಂದ ಸಂಶಯಗೊಂಡ ಮಹಿಳೆಯೋರ್ವರು ಇವರಲ್ಲಿ ಗುರುತಿನ ಚೀಟಿ ಕೇಳಿದ್ದು, ಆಗ ಇಬ್ಬರು ಗುರುತಿನ ಚೀಟಿ ಬೈಕ್ ನಲ್ಲಿ ಇದೆ, ತರುತ್ತೇವೆ ಎಂದು ಹೋದವರು ಕಣ್ಮರೆಯಾಗಿದ್ದಾರೆ. ಸಂಜೆ ವೇಳೆ ಮನೆ ಪರಿಶೀಲಿಸಿದಾಗ ಕಪಾಟಿನಲ್ಲಿದ್ದ 68ಗ್ರಾಂ ಚಿನ್ನ ಹಾಗೂ 71000ರೂ. ನಗದು ಕಳವಾಗಿರುವುದು ಗಮನಕ್ಕೆ ಬಂದಿದೆ. ಮನೆಯ ಹಿಂಬದಿ ಸ್ವಚ್ಚತೆ ಪರಿಶೀಲನೆ ನಾಟಕವಾಡುವಾಗ ಇನ್ನೊಬ್ಬ ಮನೆಗೆ ನುಗ್ಗಿರುವ ದೃಶ್ಯ ಸಿಸಿಟಿವಿ ಕ್ಯಾಮಾರಾದಲ್ಲಿ ಸರೆಯಾಗಿದೆ. ಈ ಕುರಿತು ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.