ಕಡಬ: ನ್ಯಾಯಾಲಯ ಆರಂಭಿಸಲು ನ್ಯಾಯಾಧೀಶರಿಂದ ಸ್ಥಳ ಪರಿಶೀಲನೆ

(ನ್ಯೂಸ್ ಕಡಬ) newskadaba.com ಕಡಬ, ನ. 19. ತಾಲೂಕು ಕೇಂದ್ರ ಕಡಬದಲ್ಲಿ ನ್ಯಾಯಾಲಯ ನಿರ್ಮಾಣದ ಉದ್ದೇಶದಿಂದ ಮುಖ್ಯ ಸತ್ರ ನ್ಯಾಯಾಧೀಶ ಮುರಳೀಧರ ಪೈ ಅವರು ಗುರುವಾರದಂದು ಸರಕಾರಿ ಸ್ಥಳ, ಖಾಸಗಿ ಸ್ಥಳ ಹಾಗೂ ಖಾಸಗಿ ಕಟ್ಟಡಗಳನ್ನು ವೀಕ್ಷಣೆ ಮಾಡಿದರು.

ಕಡಬ ಪಂಜ ರಸ್ತೆಯ ಗಜಾನನ ರೈಸ್ ಮಿಲ್ ಆವರಣ, ಕಡಬ ಅನುಗ್ರಹ ಸಭಾಭವನದ ಸಮೀಪ, ಕಡಬ ತಾಲೂಕು ಕಛೇರಿಯ ಬಳಿ ಅಲ್ಲದೆ ಕಡಬ ಸೈಂಟ್ ಜೋಕಿಮ್ಸ್ ಕಟ್ಟಡ, ಕಡಬ ಸಿಎ ಬ್ಯಾಂಕ್ ಕಟ್ಟಡಗಳನ್ನೂ ವೀಕ್ಷಿಸಿದ ಅವರು, ನ್ಯಾಯಾಲಯ ನಿರ್ಮಾಣಕ್ಕೆ ಪೋಲಿಸ್ ಠಾಣೆ, ಆಸ್ಪತ್ರೆ ಹಾಗೂ ಮಿನಿ ವಿಧಾನ ಸೌಧಗಳ ಸಮೀಪವೇ ಸ್ಥಳ ಸಿಕ್ಕರೆ ಅನುಕೂಲವಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಕಡಬ ತಹಶೀಲ್ದಾರ್ ಅನಂತ ಶಂಕರ್, ಸರ್ವೇ ಇಲಾಖೆಯ ಸೂಪರ್‌ವೈಸರ್ ಚಂದ್ರ ಮೂರ್ತಿ, ತಾಲೂಕು ಸರ್ವೇಯರ್ ಗಿರಿ ಗೌಡ, ಗ್ರಾಮ ಕರಣಿಕ ಹರೀಶ್, ನ್ಯಾಯವಾದಿಗಳು ಮೊದಲಾದವರು ಇದ್ದರು.

Also Read  ಚಾರ್ಮಾಡಿ ಘಾಟಿಯಲ್ಲಿ ಮತ್ತೆ ಭೂ ಕುಸಿತದ ಭೀತಿ

error: Content is protected !!
Scroll to Top