ಕೋವಿಡ್ ಲಸಿಕೆ ಹಾಕಿಸಿಕೊಳ್ಳದಿದ್ರೆ ಈ ರಾಜ್ಯದಲ್ಲಿ ರೇಷನ್ ಕ್ಯಾನ್ಸಲ್..!

(ನ್ಯೂಸ್ ಕಡಬ) newskadaba.com ನವದೆಹಲಿ, ನ. 18. ಕೋವಿಡ್ ವ್ಯಾಕ್ಸಿನ್ ಹಾಕಿಸಿಕೊಳ್ಳದ ಕುಟುಂಬಕ್ಕೆ ಪಡಿತರ ಸಾಮಗ್ರಿಗಳನ್ನು ನೀಡದೇ ಇರಲು ಮಧ್ಯಪ್ರದೇಶ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ.


ಪ್ರತಿಯೊಬ್ಬ ರೇಷನ್ ಕಾರ್ಡುದಾರರು ಎರಡೂ ಕೋವಿಡ್ ಲಸಿಕೆಯನ್ನು ಪಡೆದಿರುವುದು ಕಡ್ಡಾಯ. ಗ್ರಾಹಕರು ಈ ನಿಯಮ ಪಾಲಿಸಿದ್ದಾರೋ ಇಲ್ಲವೋ ಎಂಬುವುದನ್ನು ಪರಿಶೀಲಿಸಿ ಖಚಿತಪಡಿಸಿಕೊಳ್ಳುವುದು ರೇಷನ್ ಅಂಗಡಿಯವರ ಜವಾಬ್ದಾರಿಯಾಗಿದೆ ಎಂದು ಸರ್ಕಾರದ ಮಾರ್ಗಸೂಚಿ ತಿಳಿಸಿದೆ. ಪಡಿತರ ಚೀಟಿದಾರರು ಮೊದಲ ಅಥವಾ ಎರಡನೇ ಡೋಸ್ ಲಸಿಕೆ ಪಡೆಯದಿದ್ದರೆ ಅಂಥವರಿಗೆ ಆಹಾರ ಸಾಮಗ್ರಿಗಳನ್ನು ವಿತರಿಸಬಾರದು ಎಂದು ಆದೇಶದಲ್ಲಿ ತಿಳಿಸಿದೆ.

error: Content is protected !!

Join the Group

Join WhatsApp Group