(ನ್ಯೂಸ್ ಕಡಬ) newskadaba.com ಕುಂತೂರು, ನ. 18. ಮಾರ್ ಇವಾನಿಯೋಸ್ ಶಿಕ್ಷಕ-ಶಿಕ್ಷಣ ಮಹಾವಿದ್ಯಾಲಯ ಕುಂತೂರು ಇದರ ಆಶ್ರಯದಲ್ಲಿ “ಲಿಂಗತ್ವ, ಶಾಲೆ ಮತ್ತು ಸಮಾಜ” ಎಂಬ ವಿಷಯದ ಕುರಿತು “ವಿಚಾರ ಸಂಕಿರಣ” ಕಾರ್ಯಕ್ರಮವು ನೆರವೇರಿತು.
ಕಾಲೇಜಿನ ಪ್ರಭಾರ ಪ್ರಾಂಶುಪಾಲೆ ಶ್ರೀಮತಿ ಉಷಾ ಎಂ.ಎಲ್ ಅಧ್ಯಕ್ಷ ಸ್ಥಾನವನ್ನು ವಹಿಸಿ ಲಿಂಗತ್ವ ಎಂದರೆ, ಸರ್ವ ಸಮಾನವಾದುದು, ನಾವೆಲ್ಲಾ ಒಂದೇ ಎಂಬ ಭಾವನೆಯನ್ನು ವ್ಯಕ್ತಪಡಿಸಿದರು. ಹಾಗೆಯೇ ಈ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಶ್ರೀಮತಿ ಅತ್ರಾಡಿ ಅಮೃತ ಶೆಟ್ಟಿ ಇವರು ಗಂಡು-ಹೆಣ್ಣು ಎಂಬುದು ಸಂವೇದನೆಯಲ್ಲಿ ಮಾತ್ರ ವ್ಯತ್ಯಾಸವನ್ನು ಕಾಣಬಹುದು ಎಂದು ವಿದ್ಯಾರ್ಥಿಗಳಿಗೆ ವಿವಿಧ ರೀತಿಯ ವಿಚಾರಧಾರೆಗಳನ್ನು ಮನಮುಟ್ಟುವ ರೀತಿಯಲ್ಲಿ ತಿಳಿಸಿದರು. ಹಾಗೂ ಈ ಕಾರ್ಯಕ್ರಮವನ್ನು ಆಯೋಜಿಸಿದ ಶ್ರೀಯುತ ರಘು ನಂದನ.ಕೆ ಇವರು ಪ್ರಾಸ್ತಾವಿಕ ನುಡಿಯಲ್ಲಿ ಶಿಕ್ಷಣವೆಂದರೆ ಅದು ಶಿಕ್ಷೆ ಅಲ್ಲ, ಅದು ನಮ್ಮನ್ನು ಕಾಯುವ ಶ್ರೀರಕ್ಷೆ ಎಂದು ನುಡಿದರು. ಕಾರ್ಯಕ್ರಮದಲ್ಲಿ ಪ್ರಶಿಕ್ಷಣಾರ್ಥಿ ಶರ್ಮಿಳಾ ದ್ವಿತೀಯ ಬಿ.ಎಡ್ ಸ್ವಾಗತಿಸಿ, ಲತಾಶ್ರೀ.ಎಸ್ ದ್ವಿತೀಯ ಬಿ.ಎಡ್ ವಂದಿಸಿ, ರಕ್ಷಿತಾ ದ್ವಿತೀಯ ಬಿ.ಎಡ್ ನಿರೂಪಿಸಿದರು.