ರೈತರ ಕಣ್ಣಿಗೆ ಖಾರದಪುಡಿ ಎರಚಿ ಲಕ್ಷಾಂತರ ರೂ. ಎಗರಿಸಿದ ಖದೀಮರು..!

(ನ್ಯೂಸ್ ಕಡಬ) newskadaba.com ದಾವಣಗೆರೆ, ನ. 18. ರೈತರಿಬ್ಬರು ತಾವು ಕಷ್ಟಪಟ್ಟು ಬೆಳೆದ ವೀಳ್ಯದೆಲೆಯನ್ನು ಮಾರಾಟ ಮಾಡಿ, ತಡರಾತ್ರಿ ಬೈಕ್ ನಲ್ಲಿ ಊರಿಗೆ ವಾಪಾಸಾಗುತ್ತಿದ್ದ ವೇಳೆ, ಅರ್ಧ ದಾರಿಯಲ್ಲಿ ರೈತರನ್ನು ಅಡ್ಡಗಟ್ಟಿದ ನಾಲ್ವರು ದುಷ್ಕರ್ಮಿಗಳು, ರೈತರ ಕಣ್ಣಿಗೆ ಖಾರದಪುಡಿ ಎರಚಿ, ಅವರ ಬಳಿಯಲ್ಲಿದ್ದಂತಹ ಲಕ್ಷಾಂತರ ರೂ ಹಣವನ್ನು ದೋಚಿ ಪರಾರಿಯಾದ ಘಟನೆ ದಾವಣಗೆರೆಯ ಹರಿಹರ ತಾಲೂಕಿನಲ್ಲಿ ನಡೆದಿದೆ.

ದಾವಣಗೆರೆಗ ಬೆಳ್ಳೂಡಿ -ರಾಮತೀರ್ಥ ಗ್ರಾಮಗಳ ನಡುವಿನ ಸೇತುವೆ ಸಮೀಪ ವೀಳ್ಯದೆಲೆ ಮಾರಾಟ ಮಾಡಿ, ಊರಿಗೆ ವಾಪಾಸಾಗುತ್ತಿದ್ದಂತಹ ರೈತರಾದ ಜಗದೀಶ್ ಹಾಗೂ ವಿಶ್ವನಾಥ ಎಂಬವರನ್ನು ಅಡ್ಡಗಟ್ಟಿದ ದುಷ್ಕರ್ಮಿಗಳು ಚಾಕು ತೋರಿಸಿ ಹೆದರಿಸಿದ್ದು, ತೀವ್ರ ವಿರೋಧ ವ್ಯಕ್ತಪಡಿಸಿದ ರೈತರ ಕಣ್ಣಿಗೆ ಖಾರದ ಪುಡಿ ಎರಚಿ, ಹಣ ದೋಚಿ ಪರಾರಿಯಾಗಿದ್ದಾರೆ ಎನ್ನಲಾಗಿದೆ. ಈ ಕುರಿತು ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read  ಬಡವರಿಗೆ ಸಿಗಬೇಕಾದ ಸವಲತ್ತುಗಳನ್ನು ಉಳ್ಳವರು ಪಡೆದರೆ ಅದು ಹೆಣದ ಮೇಲಿನ ಅನ್ನ ತಿಂದಂತೆ.!➤ಸಚಿವ ಕೆ.ಎನ್. ರಾಜಣ್ಣ ಹೇಳಿಕೆ

error: Content is protected !!
Scroll to Top