ಕಾಸರಗೋಡು ಜಿಲ್ಲೆಯಾದ್ಯಂತ ಕನ್ನಡದಲ್ಲಿ ರೇಷನ್ ಕಾರ್ಡ್ ಮುದ್ರಿಸಲು ಒತ್ತಾಯ..!

(ನ್ಯೂಸ್ ಕಡಬ) newskadaba.com ಮಂಗಳೂರು, ನ. 18. ಕೇರಳದ ಕಾಸರಗೋಡು ಜಿಲ್ಲೆಯ ರೇಶನ್ ಕಾರ್ಡ್ ಗಳಲ್ಲಿ ಹೆಸರು ಮತ್ತು ಇತರ ವಿವರಗಳನ್ನು ಕನ್ನಡದಲ್ಲಿ ಮುದ್ರಿಸಬೇಕು ಎಂದು ಕರ್ನಾಟಕ ಗಡಿ ಪ್ರದೇಶ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಡಾ. ಸಿ. ಸೋಮಶೇಖರ್ ಅವರು ಕಾಸರಗೋಡಿನ ಜಿಲ್ಲಾಧಿಕಾರಿ, ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಆಹಾರ ಸಚಿವರು ಹಾಗೂ ಸರಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರದ ಮೂಲಕ ಒತ್ತಾಯಿಸಿದ್ದಾರೆ.


ಕಾಸರಗೋಡು ಜಿಲ್ಲೆಯಲ್ಲಿ ಅಕ್ಷಯ ಯೋಜನೆಯಡಿ, ಅಕ್ಷಯ ಕೇಂದ್ರಗಳಲ್ಲಿ ಹೊಸದಾಗಿ ಮುದ್ರಣವಾಗುತ್ತಿರುವ ರೇಷನ್ ಕಾರ್ಡುಗಳಲ್ಲಿ ಮಲಯಾಳಂ ಭಾಷೆ ಮಾತ್ರ ಮುದ್ರಿತವಾಗುತ್ತಿರುವುದನ್ನು ಅಲ್ಲಿನ ಕನ್ನಡ ಭಾಷಾ ಅಲ್ಪಸಂಖ್ಯಾತರು ವಿರೋಧಿಸಿರುತ್ತಾರೆ. ಈ ಹಿನ್ನೆಲೆ ಕೇರಳದ ಕಾಸರಗೋಡು ಜಿಲ್ಲೆಯಲ್ಲಿ ಮಾತೃ ಭಾಷೆಯಾಗಿ ಶೇಕಡಾ 95ರಷ್ಟು ಜನ ಕನ್ನಡವನ್ನು ಉಪಯೋಗ ಮಾಡುತ್ತಿದ್ದು, ಮಲಯಾಳಿ ಭಾಷೆ ಗೊತ್ತಿಲ್ಲದೇ ಇರುವವರು ಇದ್ದಾರೆ. ಈ ಲೋಪ ದೋಷವನ್ನು ತಕ್ಷಣವೇ ತಿದ್ದುಪಡಿ ಮಾಡಿ ಅಕ್ಷಯ ಕೇಂದ್ರಗಳಲ್ಲಿ ಬರುವ ಎಲ್ಲಾ ರೇಷನ್ ಕಾರ್ಡ್‌ಗಳಲ್ಲಿ ಕಡ್ಡಾಯವಾಗಿ ಮಲಯಾಳಂ ಭಾಷೆಯ ಜೊತೆ ಕನ್ನಡವನ್ನು ಮುದ್ರಿಸುವಂತೆ ಒತ್ತಾಯ ಮಾಡಿದ್ದಾರೆ.

Also Read  ಕೊಲೆ ಕೇಸ್ ಕೈದಿಗೆ ಕೃಷಿ ಮಾಡಲು 3 ತಿಂಗಳು ಪೆರೋಲ್: ಕರ್ನಾಟಕ ಹೈಕೋರ್ಟ್ ಆದೇಶ

 

error: Content is protected !!
Scroll to Top