ಮಂಗಳೂರು: ಇನ್ನೂ ಪತ್ತೆಯಾಗದ ಆರೋಪಿ ರಾಜೇಶ್ ಭಟ್ ➤ ವಕೀಲರ ಮನೆಯಲ್ಲಿ ಶೋಧ ಕಾರ್ಯ..!

(ನ್ಯೂಸ್ ಕಡಬ) Newskadaba.com ಮಂಗಳೂರು, ನ. 18. ಕಾನೂನು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿ ತಲೆಮರೆಸಿಕೊಂಡಿರುವ ಆರೋಪಿ ರಾಜೇಶ್ ಭಟ್ ಅವರ ಮನೆಯಲ್ಲಿ ಪ್ರಕರಣದ ತನಿಖಾಧಿಕಾರಿ ಎಸಿಪಿ ರಂಜಿತ್ ಬಂಡಾರು ಅವರ ನೇತೃತ್ವದಲ್ಲಿ ಪೊಲೀಸರು ಶೋಧಕಾರ್ಯ ನಡೆಸಿದ್ದಾರೆ.


ಪಂಚರ ಸಮಕ್ಷಮದಲ್ಲಿ ಈ ಶೋಧ ಕಾರ್ಯ ನಡೆದಿದ್ದು, ಪರಾರಿಯಾಗಿರುವ ಆರೋಪಿ ರಾಜೇಶ್ ಭಟ್‌ಗೆ ಸಂಬಂಧಿಸಿದಂತೆ ಮಾಹಿತಿಯನ್ನು ಕಲೆಹಾಕಿದ್ದಾರೆ. ಮಂಗಳೂರಿನ ಖ್ಯಾತ ವಕೀಲರಾಗಿದ್ದ ರಾಜೇಶ್ ಭಟ್ ಅವರ ಕಚೇರಿಗೆ ಇಂಟರ್ನ್‌ಶಿಪ್‌ಗೆ ಬಂದ ಕಾನೂನು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಪ್ರಕರಣ ದಾಖಲಾಗುತ್ತಿದ್ದಂತೆಯೇ ರಾಜೇಶ್ ಭಟ್ ಪರಾರಿಯಾಗಿದ್ದಾರೆ. ಆರೋಪಿ ಭಟ್‌ ಗೆ ಶೋಧ ನಡೆಸುತ್ತಿರುವ ಪೊಲೀಸರು ಆತ ವಿದೇಶಕ್ಕೆ ಹೋಗದಂತೆ ತಡೆಯಲು ಲುಕ್ ಔಟ್ ನೋಟಿಸ್ ಕೂಡಾ ಜಾರಿ ಮಾಡಿದ್ದಾರೆ. ಇದೀಗ ರಾಜೇಶ್ ಭಟ್ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕಲು ಮನೆ ಶೋಧ ನಡೆಸಿದ್ದಾರೆ.

Also Read  ಬಂಡಾಯದ ಬಿಸಿ ಎದುರಿಸಿದ್ದ ಸುಳ್ಯ ಕಾಂಗ್ರೆಸ್ 'ಬಿ' ಫಾರಂ ಪೆಂಡಿಂಗ್ ➤ ಮರು ಸರ್ವೇ ನಡೆಸುವ ತೀರ್ಮಾನಕ್ಕೆ ಬಂದ ಹೈಕಮಾಂಡ್

error: Content is protected !!
Scroll to Top