(ನ್ಯೂಸ್ ಕಡಬ) newskadaba.com ಕೊಡಗು, ನ. 18. ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಕೊಡ್ಲಿಪೇಟೆ ಗ್ರಾಮ ಪಂಚಾಯತ್ ಗೆ ಸೇರಿದ ಕೊಡ್ಲಿಪೇಟೆ ನಗರದಲ್ಲಿ ಮಾನಸಿಕ ಅಸ್ವಸ್ಥ ಮಹಿಳೆಯೊಬ್ಬರು ತುಂಬಾ ವರ್ಷದಿಂದ ಯಾರೂ ಇಲ್ಲದೆ ಅನಾಥರಾಗಿ ತಿರುಗಾಡುತ್ತಾ ಅಸಭ್ಯವಾಗಿ ವರ್ತಿಸುತ್ತಾ ಇರುತ್ತಿದ್ದು, ಇದನ್ನು ಗಮನಿಸಿದ ಶನಿವಾರಸಂತೆ ಠಾಣೆಯ ಸಿಬ್ಬಂದಿಯಾದ ಸಿದ್ದಯ್ಯ ರವರು ಶಿವರಾಮೇಗೌಡರ ಕರವೇ ತಾಲ್ಲೂಕು ಅಧ್ಯಕ್ಷರಾದ ಫ್ರಾನ್ಸಿಸ್ ಡಿಸೋಜ ರವರಿಗೆ ಮಾಹಿತಿ ತಿಳಿಸಿದ ಮೇರೆಗೆ ಕರವೇ ಕಾರ್ಯಕರ್ತರು ಶನಿವಾರಸಂತೆ ಪೊಲೀಸ್ ಠಾಣೆಯಿಂದ ಪೋಲಿಸ್ ಲೆಟರ್ ಆಟೋರಾಜ ಫೌಂಡೇಶನ್ ಗೆ ತೆಗೆದುಕೊಂಡು ಮತ್ತು ಕೊಡ್ಲಿಪೇಟೆ ಗ್ರಾಮ ಪಂಚಾಯಿತಿಯಿಂದ ಬೆಂಗಳೂರಿನ ಆಟೋ ರಾಜ ಫೌಂಡೇಶನ್ನಿಗೆ ಲೆಟರ್ ಕೊಡಲಾಗಿದೆ ಮತ್ತು ಕೊಡ್ಲಿಪೇಟೆ ಆರೋಗ್ಯ ಇಲಾಖೆ ಯಲ್ಲಿ ಕೊರೊನಾ ಟೆಸ್ಟ್ ಮಾಡಿಸಿಕೊಂಡು ಕರವೇ ಕಾರ್ಯಕರ್ತರೇ ಖುದ್ದಾಗಿ ಹೋಗಿ ಬೆಂಗಳೂರಿನ ಆಟೋರಾಜ ಫೌಂಡೇಶನಿಗೆ ಒಳ್ಳೆಯ ಚಿಕಿತ್ಸೆ ಕೊಡಿಸಲು ಬಿಟ್ಟು ಬಂದಿರುತ್ತೇವೆ.
ಈ ಮಾನಸಿಕ ಅಸ್ವಸ್ಥ ಮಹಿಳೆಯನ್ನು ಉತ್ತಮ ಚಿಕಿತ್ಸೆ ಕೊಡಿಸಲು ಆಟೋ ರಾಜ ಫೌಂಡೇಶನ್ ಗೆ ಸೇರಿಸಿಕೊಂಡಿದ್ದಕ್ಕೆ ಆಟೋರಾಜ ಫೌಂಡೇಶನ್ ಗೆ ನವರಿಗೆ ತುಂಬು ಹೃದಯದ ಧನ್ಯವಾದ ಅರ್ಪಿಸುತ್ತೇವೆ. ನಮಗೆ ಸಹಕಾರ ನೀಡಿದ ಶನಿವಾರಸಂತೆ ಪೊಲೀಸ್ ಠಾಣೆಗೆ ಮತ್ತು ಪೋಲಿಸ್ ಠಾಣೆಯ ಸಿಬ್ಬಂದಿಯಾದ ಸಿದ್ದಯ್ಯ ರವರಿಗೆ ಮತ್ತು ಸಿಬ್ಬಂದಿಗಳಿಗೆ ಮತ್ತು ಹೃದಯಪೂರ್ವಕ ಧನ್ಯವಾದ ಅರ್ಪಿಸುತ್ತೇನೆ ಮತ್ತು ಕೊಡ್ಲಿಪೇಟೆ ಗ್ರಾಮ ಪಂಚಾಯಿತಿಯವರು ಆಟೋರಾಜ ಪೌಂಡೇಶನ್ಗೆ ಲೆಟರ್ ಕೊಟ್ಟಿದಕ್ಕೆ ತುಂಬು ಹೃದಯದ ಧನ್ಯವಾದಗಳು ಮತ್ತು ಕೊರೊನಾ ಟೆಸ್ಟ್ ರಿಪೋರ್ಟ್ ಮಾಡಿಕೊಟ್ಟ ಕೊಡ್ಲಿಪೇಟೆ ಆರೋಗ್ಯ ಕೇಂದ್ರದ ಸಿಬ್ಬಂದಿಗಳಿಗೆ ಧನ್ಯವಾದ ಅರ್ಪಿಸುತ್ತೇನೆ. ಈ ಸಂದರ್ಭದಲ್ಲಿ ಸೋಮವಾರಪೇಟೆ ತಾಲೂಕು ಅಧ್ಯಕ್ಷರಾದ ಕರವೇ ಫ್ರಾನ್ಸಿಸ್ ಡಿಸೋಜಾ ಮತ್ತು ಯೋಗೇಶ್ ಮತ್ತು ವಿಜಯಕುಮಾರ್ ಇದ್ದರು.