ನೆಲ್ಯಾಡಿಯಲ್ಲಿ ಮತ್ತೆ ಕಳ್ಳರ ಕೈಚಳಕ ➤ ಗುಜರಿ ಅಂಗಡಿಗೆ ನುಗ್ಗಿದ ಕಳ್ಳರು

(ನ್ಯೂಸ್ ಕಡಬ) newskadaba.com ನೆಲ್ಯಾಡಿ, ನ.18. ವಾರದ ಹಿಂದಷ್ಟೇ ಸರಣಿ ಕಳ್ಳತನದಿಂದ ಹೈರಾಣಾಗಿದ್ದ ನೆಲ್ಯಾಡಿಯಲ್ಲಿ ಇಂದು ಮತ್ತೆ ಕಳ್ಳರು ತಮ್ಮ ಕೈಚಳಕವನ್ನು ತೋರಿದ್ದಾರೆ.

ತಡರಾತ್ರಿ ವೇಳೆ ನೆಲ್ಯಾಡಿಯಲ್ಲಿರುವ ಗುಜರಿ ಅಂಗಡಿಯ ಬಾಗಿಲು ನುರಿದು ಒಳನುಗ್ಗಿರುವ ಕಳ್ಳರು ಸ್ವತ್ತುಗಳನ್ನು ಕಳವುಗೈದಿದ್ದಾರೆ. ಇದನ್ನು ಗಮನಿಸಿದ ಅಲ್ಲಿದ್ದವರು ಸ್ಥಳಕ್ಕಾಗಮಿಸಿದ ವೇಳೆ ಪಿಕಪ್ ವಾಹನದಲ್ಲಿ ಕಳ್ಳರು ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಸ್ಥಳಕ್ಕೆ ನೆಲ್ಯಾಡಿ ಹೊರಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Also Read  ದಿಲ್ಲಿ ಹಿಂಸಾಚಾರ: ಸಂತ್ರಸ್ತರಿಗೆ ಪರಿಹಾರ ಘೋಷಿಸಿದ ಸಿಎಂ ಕೇಜ್ರಿವಾಲ್

 

 

error: Content is protected !!
Scroll to Top