ಶರಣ್ ಪಂಪ್ ವೆಲ್ ಕ್ಷಮೆ ಯಾಚಿಸದಿದ್ದರೆ ಪ್ರತಿಭಟನೆ ➤ ಬಿರುವೆರ್ ಕುಡ್ಲ ಎಚ್ಚರಿಕೆ

(ನ್ಯೂಸ್ ಕಡಬ) newskadaba.com ಉಡುಪಿ, ನ. 17. ನಾಳೆಯೊಳಗೆ ಶರಣ್ ಪಂಪ್ವೆಲ್ ಕ್ಷಮೆ ಕೇಳದಿದ್ದರೆ ಬಳ್ಳಾಲ್ ಬಾಗ್ ನಲ್ಲಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಬಿರುವೆರ್ ಕುಡ್ಲ ಸಂಘಟನೆ ಎಚ್ಚರಿಕೆ ನೀಡಿದೆ.

ಈ ಕುರಿತು ಉಡುಪಿ ಬಿರುವೆರ್ ಕುಡ್ಲ ಘಟಕ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದು, ಬಿರುವೆರ್ ಕುಡ್ಲ ಸಂಘಟನೆಯ ಹೆಸರು ಕೆಡಿಸಲು ಷಡ್ಯಂತ್ರ ನಡೆಯುತ್ತಿದ್ದು, ಸಂಘಟನೆಯ ಉತ್ತಮ ಸಮಾಜ ಸೇವೆಯನ್ನು ಕಂಡು ಸಹಿಸಲಾಗದ ಕೆಲವೊಂದು ವ್ಯಕ್ತಿಗಳು ನಮ್ಮ ಸಂಘಟನೆಗರ ಮಸಿ ಬಳಿಯುವ ಪ್ರಯತ್ನ ಮಾಡುತ್ತಿದ್ದಾರೆ. ಶರಣ್ ಪಂಪ್ವೆಲ್ ಪೂರ್ಣ ಮಾಹಿತಿ ತಿಳಿಯದೆ ಸಂಘಟನೆಯ ಮೇಲೆ ಆರೋಪ ಮಾಡಿದ್ದು ಬೇಸರದ ವಿಚಾರ. ಇದಕ್ಕಾಗಿ ನಾಳೆಯೊಳಗೆ ಕ್ಷಮೆ ಯಾಚಿಸಬೇಕು. ಇಲ್ಲದಿದ್ದರೆ ಬಳ್ಳಾಲ್ ಭಾಗ್ ನಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

Also Read  ತಾರಸಿ ತೋಟ ಮತ್ತು ಕೈತೋಟ ತರಬೇತಿ

error: Content is protected !!
Scroll to Top