ಪುತ್ತೂರು: ಮೇಯಲು ಬಿಟ್ಟಿದ್ದ ದನ-ಕರುಗಳು ನಾಪತ್ತೆ ➤ ಕಾರಿನಲ್ಲಿ ಅಪಹರಿಸುತ್ತಿರುವ ದೃಶ್ಯ ಸಿಸಿಟಿವಿ ಯಲ್ಲಿ ಸೆರೆ ➤➤ ಗೋಕಳ್ಳರ ಪತ್ತೆಗೆ ಆಗ್ರಹ

(ನ್ಯೂಸ್ ಕಡಬ) newskadaba.com ಪುತ್ತೂರು, ನ. 17. ಮೇಯಲು ಬಿಟ್ಟಿದ ದನ ಮತ್ತು ಎರಡು ಕರುಗಳನ್ನು ಅಪಹರಿಸಿರುವ ಘಟನೆ ಕೊಡಿಪ್ಪಾಡಿಯಲ್ಲಿ ನಡೆದಿದೆ.


ಕೊಡಿಪ್ಪಾಡಿ ಶ್ರೀ ಜನಾರ್ದನ ದೇವಸ್ಥಾನದ ಬಳಿಯ ಲಕ್ಷ್ಮಣ ಗೌಡ ಎಂಬವರ ಒಂದು ದನ ಮತ್ತು ಎರಡು ಕರುವನ್ನು‌ ಅಲ್ಲಿನ ಸಮೀಪದ ಗುಡ್ಡೆಯಲ್ಲಿ ಮೇಯಲು ಬಿಟ್ಟಿದ್ದು, ದನ ಹಾಗೂ ಕರುಗಳು ವಾಪಸ್ ಬಾರದೇ ಇದ್ದ ಹಿನ್ನೆಲೆ ಹಲವೆಡೆ ಹುಡುಕಾಟ ನಡೆಸಲಾಗಿತ್ತು. ಎಲ್ಲಿಯೂ ಪತ್ತೆಯಾಗದ ನಿಟ್ಟಿನಲ್ಲಿ ಲಕ್ಷ್ಮಣ ಗೌಡರವರ ಪುತ್ರಿ ರಕ್ಷಿತಾರವರು ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.‌ ಬಳಿಕ ಮನೆಯವರು ಎಲ್ಲೆಡೆ ಹುಡುಕಾಡಿದರೂ ದನ, ಕರು ಪತ್ತೆಯಾಗಿರಲಿಲ್ಲ. ಇದೀಗ ಕೊಡಿಪ್ಪಾಡಿ ಶ್ರೀ ಜನಾರ್ದನ ದೇವಸ್ಥಾನದ ಸಿ.ಸಿ.ಟಿ.ವಿ.ಯನ್ನು ಸ್ಥಳೀಯರು ಪರಿಶೀಲನೆ ನಡೆಸಿದಾಗ ದನ ಮತ್ತು ಕರುಗಳನ್ನು ಕಾರೊಂದರಲ್ಲಿ ತುಂಬಿಸಿ ಅಪಹರಿಸಿರುವ ದೃಶ್ಯ ಪತ್ತೆಯಾಗಿದೆ. ದನಗಳ್ಳರನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಲಕ್ಷ್ಮಣ ಗೌಡರ ಮನೆಯವರು ಆಗ್ರಹಿಸಿದ್ದಾರೆ.

Also Read  ಕಡಬ: ಮಳೆಗೆ ಗುಡ್ಡ ಕುಸಿದು ಧರೆಗುರುಳಿದ ವಿದ್ಯುತ್ ಕಂಬ ► ಮೂರು ದಿನಗಳು‌ ಕಳೆದರೂ ಇನ್ನೂ ತೆರವುಗೊಳಿಸದ ಸ್ಥಳೀಯಾಡಳಿತ

error: Content is protected !!
Scroll to Top