ಎಡಮಂಗಲ: ನಾಯಿ ಅಡ್ಡಬಂದ ಪರಿಣಾಮ ಮಗುಚಿಬಿದ್ದ ಸ್ಕೂಟರ್ ➤ ಸಹಸವಾರ ಮೃತ್ಯು

(ನ್ಯೂಸ್ ಕಡಬ) newskadaba.com ಕಡಬ, ನ. 17. ನಾಯಿಯೊಂದು ದ್ವಿಚಕ್ರ ವಾಹನಕ್ಕೆ ಅಡ್ಡಬಂದ ಪರಿಣಾಮ ಅಪಘಾತ ಸಂಭವಿಸಿ ಸಹಸವಾರ ಮೃತಪಟ್ಟ ಘಟನೆ ಎಡಮಂಗಲದಲ್ಲಿ ನಡೆದಿದೆ.

ಮೃತಪಟ್ಟವರನ್ನು ಸುರೇಶ್ (53) ಎಂದು ಗುರುತಿಸಲಾಗಿದೆ. ಇವರು ಎಡಮಂಗಲದಿಂದ ಕೊಳಂಬೆ ಎಂಬಲ್ಲಿಗೆ ಟ್ಯಾಪಿಂಗ್ ಗೆ ಮಾಡಲು ತಮ್ಮ ಸಂತೋಷ್ ಎಂಬವರೊಂದಿಗೆ ಸ್ಕೂಟರ್ ನಲ್ಲಿ ತೆರಳುತ್ತಿದ್ದ ವೇಳೆ ನಾಯಿ ಅಡ್ಡ ಬಂದ ಪರಿಣಾಮ ಸ್ಕೂಟರ್ ನಿಯಂತ್ರಣ ತಪ್ಪಿ ಮಗುಚಿಬಿದ್ದಿದೆ. ಪರಿಣಾಮ ಸುರೇಶ್ ಎಂಬವರು ಗಂಭೀರ ಗಾಯಗೊಂಡಿದ್ದು, ತಕ್ಷಣವೇ ಕಡಬ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಅಲ್ಲಿನ ವೈದ್ಯರ ಸಲಹೆಯಂತೆ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಈ ಕುರಿತು ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read  ರಕ್ಷಣಾ ಸಚಿವಾಲಯದ ಸಲಹಾ ಸಮಿತಿ ಸದಸ್ಯರಾಗಿ ದ.ಕ. ಸಂಸದ ಚೌಟ ನೇಮಕ

error: Content is protected !!
Scroll to Top