ಬೈಕ್ ಸವಾರರಿಗೆ ಸಿಹಿಸುದ್ದಿ ➤ ಹೊಸದಾಗಿ ಬಂತು ಎ.ಸಿ ಹೆಲ್ಮೆಟ್..!!

(ನ್ಯೂಸ್ ಕಡಬ) newskadaba.com ಹೈದ್ರಾಬಾದ್, ನ. 17. ಜಗತ್ತಿನಲ್ಲಿ ಇದೇ ಮೊದಲ ಬಾರಿಗೆ ಎಸಿ ಇರುವ ಹೆಲ್ಮೆಟ್ ಅನ್ನು ಹೈದರಾಬಾದ್ ನ ಉದ್ಯಮಿಗಳು ತಯಾರು ಮಾಡಿದ್ದು, ಈ ಎಸಿ ಹೆಲ್ಮೆಟ್ ನ್ನು ಇತ್ತೀಚೆಗೆ ದುಬೈ ನಲ್ಲಿ ನಡೆದ ಎಕ್ಸ್ ಪೋ 2020ರಲ್ಲಿ ಪ್ರದರ್ಶನ ಮಾಡಲಾಗಿದೆ.

ಕೌಸ್ತುಭ್ ಕೌಂಡಿನ್ಯ, ಶ್ರೀಕಾಂತ್ ಕೊಮ್ಮುಲಾ ಹಾಗೂ ಆನಂದ್ ಕುಮಾರ್ ಎನ್ನುವ ಹೈದರಾಬಾದ್‌ನ ಮೂವರು ಮೆಕ್ಯಾನಿಕಲ್ ಇಂಜಿನಿಯರ್ ಗಳು ಈ ಏರ್ ಕಂಡೀಷನರ್ ಹೆಲ್ಮೆಟ್ ಅನ್ನು ತಯಾರಿಸಿದ್ದಾರೆ. ಈ ಹೆಲ್ಮೆಟ್ ಗಂಟೆಗೆ 24 ಸೆಲ್ಸಿಯನ್ ತಾಪಮಾನ ನಿಯಂತ್ರಿಸಲಿದ್ದು, ಇದರಲ್ಲಿ ವಾಹನ ಸವಾರರಿಗೆ, ಕಟ್ಟಡ ಕಾರ್ಮಿಕರಿಗೆ ಹಾಗೂ ವೆಲ್ಡಿಂಗ್ ಕಾರ್ಮಿಕರಿಗೆ ಎಂದು ಮೂರು ರೀತಿಯಲ್ಲಿ ತಯಾರಿಸಿದ್ದಾರೆ. 650 ಗ್ರಾಂ. ತೂಕ ಇರುವ ಈ ಹೆಲ್ಮೆಟ್ ಬೆಲೆ 6 ಸಾವಿರದಿಂದ 10 ಸಾವಿರ ರೂಪಾಯಿವರೆಗೆ ಇರಲಿದೆ. ಅಲ್ಲದೇ ಇದನ್ನು ಖರೀದಿಸುವ ಬದಲಿಗೆ 10-15 ರೂ.ಗೆ ಬಾಡಿಗೆಗೆ ಕೂಡ ಪಡೆಯಬಹುದಾಗಿದೆ. ಈ ಹೆಲ್ಮೆಟ್ 2 ಗಂಟೆಯಿಂದ 10 ಗಂಟೆಗಳ ಕಾಲ ನಿರಂತರವಾಗಿ ಕಾರ್ಯನಿರ್ವಹಿಸುತ್ತದೆ ಎಂದು ತಿಳಿಸಿದ್ದಾರೆ.

Also Read  ಗ್ಯಾಸ್ ಟ್ಯಾಂಕರ್ ಪಲ್ಟಿಯಾದ ಹಿನ್ನೆಲೆ | ಮಾಣಿ - ಕಲ್ಲಡ್ಕ ಹೆದ್ದಾರಿ ಬ್ಲಾಕ್ ➤ ಪರಿಸರದಲ್ಲಿ ಬೆಂಕಿ ಉರಿಸದಂತೆ ಸೂಚನೆ

error: Content is protected !!
Scroll to Top