ನದಿಗೆ ಉರುಳಿಬಿದ್ದ ಪೊಲೀಸ್ ವಾಹನ ➤ ಇಬ್ಬರು ಮೃತ್ಯು, ನಾಲ್ವರು ಗಂಭೀರ

(ನ್ಯೂಸ್ ಕಡಬ) newskadaba.com ಪೂಂಚ್, ನ. 17. ಪೊಲೀಸ್ ಬೆಂಗಾವಲು ವಾಹನವೊಂದು ಸ್ಕಿಡ್ ಆಗಿ ನದಿಗೆ ಉರುಳಿಬಿದ್ದ ಪರಿಣಾಮ ಇಬ್ಬರು ಪೊಲೀಸ್ ಸಿನ್ಬಂದಿಗಳು ಮೃತಪಟ್ಟು, ನಾಲ್ವರು ಗಂಭೀರ ಗಾಯಗೊಂಡ ಘಟನೆ ಜಮ್ಮು-ಕಾಶ್ಮೀರದ ಪೂಂಚ್​ ಜಿಲ್ಲೆಯಲ್ಲಿ ನಡೆದಿದೆ.

ಬುಫ್ಲಿಯಾಜ್ ಪ್ರದೇಶದ ಡ್ರೋಗ್ಜಿಯಾನ್ ಗ್ರಾಮದಲ್ಲಿ ಪೂಂಚ್‌ನ ಹಿರಿಯ ಪೊಲೀಸ್ ಅಧೀಕ್ಷಕರ ಬೆಂಗಾವಲು ವಾಹನ ಚಾಲಕನ ನಿಯಂತ್ರಣ ತಪ್ಪಿ ಉರುಳಿಬಿದ್ದ ಈ ದುರ್ಘಟನೆ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಘಟನೆಯ ಬಳಿಕ ಗಂಭೀರ ಗಾಯಗೊಂಡ ಸ್ಥಿತಿಯಲ್ಲಿದ್ದ ಆರು ಪೊಲೀಸರನ್ನು ರಕ್ಷಿಸಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಈ ಪೈಕಿ ಓರ್ವ ಪೊಲೀಸ್​ ಆಸ್ಪತ್ರೆಗೆ ಹೋಗುವಾಗಲೇ ಮೃತಪಟ್ಟಿದ್ದರು. ಇನ್ನುಳಿದ ಐವರನ್ನು ರಾಜೌರಿ ಜಿಲ್ಲೆಯ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದ್ದು, ಆದರೆ ಇನ್ನೊಬ್ಬ ಸಿಬ್ಬಂದಿಯು ಚಿಕಿತ್ಸೆ ಪಡೆಯುತ್ತಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

Also Read  'ಬಿಎಸ್‌ಎಫ್‌ನಲ್ಲಿ ಮಾಜಿ ಅಗ್ನಿವೀರ್‌ಗಳಿಗೆ 10% ಮೀಸಲಾತಿ'     ➤ ಕೇಂದ್ರ ಸರ್ಕಾರ ಘೋಷಣೆ    

error: Content is protected !!
Scroll to Top