ವಾಯುಮಾಲಿನ್ಯದಿಂದ‌ ಕಂಗೆಟ್ಟ ರಾಷ್ಟ್ರ ರಾಜಧಾನಿ..! ➤ ಆನ್ ಲೈನ್ ಕ್ಲಾಸ್ ಮೊರೆ‌ಹೋದ ವಿದ್ಯಾರ್ಥಿಗಳು

(ನ್ಯೂಸ್ ಕಡಬ) newskadaba.com ನವದೆಹಲಿ, ನ. 17. ರಾಷ್ಟ್ರ ರಾಜಧಾನಿಯಲ್ಲಿ ದಿನದಿಂದ ದಿನಕ್ಕೆ ವಾಯುಮಾಲಿನ್ಯ ಪ್ರಮಾಣ ಏರಿಕೆಯಾಗುತ್ತಿದೆ. ಇದರಿಂದ ದೆಹಲಿ ಎನ್ ಸಿಆರ್ ನಲ್ಲಿ ದಟ್ಟ ಹೊಗೆ ಆವರಿಸಿದ್ದು, ಇದೇ ಸಂದರ್ಭ ಶಾಲಾ ಕಾಲೇಜುಗಳ ಸಹಿತ ಇತರ ಶೈಕ್ಷಣಿಕ ಸಂಸ್ಥೆಗಳನ್ನು ಬಂದ್ ಮಾಡಲು ವಾಯು ಮಾಲಿನ್ಯ ಗುಣಮಟ್ಟ ನಿರ್ವಹಣಾ ಸಮಿತಿ ನಿರ್ದೇಶಿಸಿದೆ.

ವಾಯುಮಾಲಿನ್ಯ ಹಿನ್ನೆಲೆ ದೆಹಲಿಯಲ್ಲಿ ಮತ್ತೆ ಆನ್ ಲೈನ್ ಕ್ಲಾಸ್ ಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಅಲ್ಲದೇ ಮಾಲಿನ್ಯ ನಿಯಂತ್ರಣಕ್ಕಾಗಿ ನ. 21ರವರೆಗೆ ಯಾವುದೇ ಕಟ್ಟಡ ಕಾಮಗಾರಿ, ಕಟ್ಟಡ ತೆರವು ಕಾರ್ಯಾಚರಣೆ ನಡೆಸದಂತೆ ಸೂಚಿಸಲಾಗಿದೆ. ಬಸ್, ರೈಲು, ಮೆಟ್ರೋ ಮತ್ತು ಮಿಲಿಟರಿಗೆ ಸಂಬಂಧಿಸಿದ ವಿಚಾರಗಳನ್ನು ಕಠಿಣ ನಿಯಮಗಳ ಪ್ರಕಾರ ನಡೆಸುವಂತೆ ತಿಳಿಸಲಾಗಿದೆ. ಅಗತ್ಯ ವಸ್ತುಗಳಲ್ಲದ ಟ್ರಕ್ ಗಳಿಗೆ ಭಾನುವಾರದವರೆಗೆ ನಿರ್ಬಂಧಿಸಲಾಗಿದೆ.

Also Read  ಮಧ್ಯಪ್ರದೇಶ ಮುಖ್ಯಮಂತ್ರಿ ಕಾಮಲ್ ನಾಥ್ ರಾಜೀನಾಮೆ

error: Content is protected !!
Scroll to Top