ಪೇಜಾವರ ಶ್ರೀಗಳ ವಿರುದ್ದ ಅವಹೇಳಕಾರಿ ಹೇಳಿಕೆ ➤ ಹಂಸಲೇಖ ವಿರುದ್ದ ದೂರು ದಾಖಲು..!

(ನ್ಯೂಸ್ ಕಡಬ) newskadaba.com ಬೆಂಗಳೂರು, ನ. 17. ಪೇಜಾವರ ಶ್ರೀಗಳ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ್ದ ಸಂಗೀತ ನಿರ್ದೇಶಕ ಹಂಸಲೇಖ ಅವರ ವಿರುದ್ಧ ಬೆಂಗಳೂರಿನ ಹನುಮಂತನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಸಾಮಾಜಿಕ ಸಾಮರಸ್ಯಕ್ಕಾಗಿ ಪೇಜಾವರ ಶ್ರೀಗಳು ಕೈಗೊಂಡ ಕಾರ್ಯದ ಬಗ್ಗೆ ಹಂಸಲೇಖ ಅವರು ಕೇವಲವಾಗಿ ಮಾತನಾಡಿ, ತಮ್ಮ ಆರಾಧ್ಯ ದೈವ ಬಿಳಿಗಿರಿ ರಂಗಸ್ವಾಮಿ ದೇವರ ಬಗೆಗಿನ ಜನಪದೀಯ ಕಥೆಯನ್ನೂ ಹಂಸಲೇಖ ತುಚ್ಛವಾಗಿಸಿದ್ದಾರೆ. ಇದರಿಂದ ಧಾರ್ಮಿಕ ನಂಬಿಕೆ ಹಾಗೂ ಆಸ್ತಿಕ ಸಮಾಜದ ಸಾಮರಸ್ಯಕ್ಕೆ ಧಕ್ಕೆಯುಂಟಾಗಿದ್ದು, ಹಂಸಲೇಖ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಬೆಂಗಳೂರಿನ ಕೃಷ್ಣರಾಜ ಎಂಬವರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

Also Read  ಹೆಬ್ರಿ : ಮುದ್ದು ಮಗಳಿಗೆ "ಸೈನ್ಯ" ವೆಂದು ನಾಮಕರಣ

error: Content is protected !!
Scroll to Top