ನೆಲ್ಯಾಡಿ: ಭಾರೀ ಮಳೆಗೆ ನೀರಿನಲ್ಲಿ ಕೊಚ್ಚಿಹೋದ ಸ್ಕೂಟರ್ & ಸವಾರ ➤ ಧರ್ಮಸ್ಥಳ ಶೌರ್ಯ ತಂಡದಿಂದ ರಕ್ಷಣೆ

(ನ್ಯೂಸ್ ಕಡಬ) newskadaba.com ನೆಲ್ಯಾಡಿ, ನ. 16. ಸ್ಕೂಟರ್ ಸಹಿತ ಮಳೆ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ವ್ಯಕ್ತಿಯನ್ನು ಧರ್ಮಸ್ಥಳ ಶೌರ್ಯ ತಂಡದ ಸದಸ್ಯರು ರಕ್ಷಿಸಿದ ಘಟನೆ ಕೊಕ್ಕಡ ಸಮೀಪದ ಪೆರಿಯಶಾಂತಿ ಎಂಬಲ್ಲಿ ಭಾನುವಾರದಂದು (ನ. 14) ನಡೆದಿದೆ.

ವ್ಯಕ್ತಿಯೋರ್ವರು ಪೆರಿಯಶಾಂತಿ ಮೂಲಕ ನಿಡ್ಲೆಗೆ ಹೋಗುತ್ತಿದ್ದ ವೇಳೆ ಸುರಿದ ಭಾರೀ ಮಳೆಯಿಂದಾಗಿ ಕೃತಕ ನೆರೆ ಉಂಟಾಗಿ ರಸ್ತೆಯಲ್ಲಿ ನೀರು ರಭಸವಾಗಿ ಹರಿಯುತ್ತಿತ್ತು. ಇದೇ ನೀರಿನ ಮೇಲೆ ಸವಾರ ತನ್ನ ಸ್ಕೂಟರ್ ಚಲಾಯಿಸಿದ್ದು, ಈ ವೇಳೆ ನಿಯಂತ್ರಣ ತಪ್ಪಿದ ಸ್ಕೂಟರ್ ನೀರಿನಲ್ಲಿ ಕೊಚ್ಚಿಕೊಂಡು ಹೋಗಲು ಪ್ರಾರಂಭಿಸಿತ್ತು. ಇದೇ ಸಂದರ್ಭದಲ್ಲಿ ಗುಂಡ್ಯದಿಂದ ಬರುತ್ತಿದ್ದ ಧರ್ಮಸ್ಥಳ ಶೌರ್ಯ ತಂಡದ ಸ್ವಯಂ ಸೇವಕರು ತಕ್ಷಣವೇ ಕಾರ್ಯಪ್ರವೃತ್ತರಾಗಿ ಸ್ಕೂಟರ್ ಹಾಗೂ ಸವಾರನನ್ನು ರಕ್ಷಿಸಿದ್ದಾರೆ ಎನ್ನಲಾಗಿದೆ.

Also Read  ಕರ್ನಾಟಕಕ್ಕೆ ಪ್ರತ್ಯೇಕ ಧ್ವಜಕ್ಕೆ ಸಂಬಂದಿಸಿದ ಅರ್ಜಿ ವಜಾ: ಹೈ ಕೋರ್ಟ್

error: Content is protected !!
Scroll to Top