ನಿಯಂತ್ರಣ ತಪ್ಪಿ ಕೆರೆಗೆ ಉರುಳಿಬಿದ್ದ ಕಾರು..! ➤ ದಂಪತಿಗಳಿಬ್ಬರು ಮೃತ್ಯು

(ನ್ಯೂಸ್ ಕಡಬ) newskadaba.com ಕಾರವಾರ, ನ. 16. ನಿವೃತ್ತ ಯೋಧರೋರ್ವರು ತನ್ನ ಪತ್ನಿ ಜೊತೆಗೆ ಓರ್ವ ಸಂಬಂಧಿಕರ ಅಂತ್ಯಕ್ರಿಯೆಗೆ ಕಾರಿನಲ್ಲಿ ತೆರಳುತ್ತಿದ್ದ ವೇಳೆ ನಿಯಂತ್ರಣ ತಪ್ಪಿ ಕೆರೆಗೆ ಉರುಳಿಬಿದ್ದ ಪರಿಣಾಮ ದಂಪತಿಗಳಿಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ನಡೆದಿದೆ.

ಮೃತರನ್ನು ಸಿಆರ್ಪಿಎಫ್ ನಿವೃತ್ತ ಯೋಧ ರಾಜು ವರ್ಗೀಸ್ ಹಾಗೂ ಪತ್ನಿ ಬ್ಲೆಸ್ಸಿ ಎಂದು ಗುರುತಿಸಲಾಗಿದೆ. ಬೆಂಗಳೂರಿನಲ್ಲಿ ವಾಸವಾಗಿದ್ದ ಇವರು, ಸಂಬಂಧಿಕರೋರ್ವರು ನಿಧನರಾಗಿದ್ದ ಹಿನ್ನೆಲೆ ಅಂತ್ಯಕ್ರಿಯೆಗೆಂದು ಕರವಳ್ಳಿ ಎಂಬಲ್ಲಿಗೆ ತೆರಳುತ್ತಿದ್ದ ವೇಳೆ ನಿಯಂತ್ರಣ ತಪ್ಪಿದ ಕಾರು ಮುಂಡಗೋಡದ ಅಮ್ಮಾಜಿ ಕೆರೆಗೆ ಉರುಳಿಬಿದ್ದಿದೆ. ಕಾರು ಉಲ್ಟಾ ಬಿದ್ದಿದ್ದರಿಂದ ಡೋರ್ ತೆಗೆಯಲಾಗದೇ ಇಬ್ಬರು ಮೃತಪಟ್ಟಿದ್ದಾರೆ ಎನ್ನಲಾಗಿದೆ.

Also Read  ಗ್ಯಾಸ್ ಟ್ಯಾಂಕರ್ - ಕಾರು ಮಧ್ಯೆ ಮುಖಾಮುಖಿ ಢಿಕ್ಕಿ ➤ ನಿಂತಿಕಲ್ಲಿನಿಂದ ತೆರಳುತ್ತಿದ್ದ ಆರು ಮಂದಿ ಗಂಭೀರ

error: Content is protected !!
Scroll to Top