ರಾಜ್ಯ ರಾಜಧಾನಿಯಲ್ಲಿ ಬ್ಲಡ್ ಡೋನರ್ಸ್ ಮಂಗಳೂರು ಇವರಿಂದ ಪುನೀತ್ ಸ್ಮರಣಾರ್ಥ ಯಶಸ್ವಿ ರಕ್ತದಾನ ಶಿಬಿರ

(ನ್ಯೂಸ್ ಕಡಬ) newskadaba.com ಬೆಂಗಳೂರು, ನ. 16. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸ್ಮರಣಾರ್ಥವಾಗಿ, ಗೆಳೆಯರ ಬಳಗ ಬೆಂಗಳೂರು ಬ್ಲಡ್ ಡೋನರ್ಸ್ ಮಂಗಳೂರು (ರಿ) ಇದರ ಸಂಯುಕ್ತ ಆಶ್ರಯದಲ್ಲಿ ರೆಡ್ ಕ್ರಾಸ್ ಸಂಸ್ಥೆ ಬೆಂಗಳೂರು ಇದರ ಸಹಯೋಗದಲ್ಲಿ ಬೃಹತ್ ರಕ್ತದಾನ ಶಿಬಿರವು ಸಿಟಿ ಸೆಂಟರ್ ಹತ್ತಿರ ಗಾಂಧಿನಗರ ಬೆಂಗಳೂರಿನಲ್ಲಿ ಜರುಗಿತು.

ಕಾರ್ಯಕ್ರಮವನ್ನು ಶಾಫಿ ಸಅದಿ, ಎಸ್ಸೆಸ್ಸೆಫ್ ಕಾರ್ಯಕಾರಿಣಿ ಸದಸ್ಯರು ಕರ್ನಾಟಕ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ, ದೀಪಿಕಾ ರೆಡ್ಡಿ, ಪ್ರಧಾನ ಕಾರ್ಯದರ್ಶಿ ಕರ್ಣಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿ, ಮನ್ನಾರ್ ಮಣ್ಣಾನ್ ಪ್ರಧಾನ ಕಾರ್ಯದರ್ಶಿ ಕರ್ಣಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿ, ಡಾ|| ನರೇಶ್ ಬಾಬು ಮೆಡಿಕಲ್ ಆಫೀಸರ್, ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಕರ್ಣಾಟಕ, ರೇಶ್ಮಾ ರೈ ಕೌನ್ಸಿಲರ್ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಕರ್ಣಾಟಕ, ಸೈಯದ್ ಉಮರ್ ಮಾಲಕರು ಹಿಂದುಸ್ತಾನ್ ಸಿಟಿ ಸೆಂಟರ್ ಬೆಂಗಳೂರು, ಮೊಹಿಯುದೀನ್ ಮುಖಂಡರು ಜೆಡಿಎಸ್, ಸಿದ್ದೀಕ್ ಮಂಜೇಶ್ವರ ಅಧ್ಯಕ್ಷರು ಬ್ಲಡ್ ಡೋನರ್ಸ್ ಮಂಗಳೂರು ರಿ, ಅಶ್ರಫ್ ಉಪ್ಪಿನಂಗಡಿ ಉಪಾಧ್ಯಕ್ಷರು ಬ್ಲಡ್ ಡೋನರ್ಸ್ ಮಂಗಳೂರು ರಿ, ನವಾಝ್ ಕಲ್ಲರುಕೋಡಿ ಪ್ರಧಾನ ಕಾರ್ಯದರ್ಶಿ ಬ್ಲಡ್ ಡೋನರ್ಸ್ ಮಂಗಳೂರು ರಿ, ಹಾಗೂ ಬ್ಲಡ್ ಡೋನರ್ಸ್ ಮಂಗಳೂರು ರಿ ಕಾರ್ಯ ನಿರ್ವಾಹಕರಾದ, ಫಾರೂಕ್ ಜ್ಯೂಸ್ ರೊಮಾಂಟಿಕ್, ಫಾರೂಕ್ ಬಿಗ್ ಗ್ಯಾರೇಜ್, ನೌಫಲ್ ಬಜ್ಪೆ, ಮನ್ಸೂರ್ ಕೋಡಿಜಾಲ್, ತಾಜು ಮಂಜನಾಡಿ ಉಪಸ್ಥಿತರಿದ್ದರು. ನಿಝಾಮುದ್ದೀನ್ ಉಪ್ಪಿನಂಗಡಿ ತಬೂಕ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಪರಿಸರ ನಿವಾಸಿಗಳು ಸ್ಥಳೀಯರು ಭಾಗವಹಿಸಿ 108 ರಕ್ತದಾನಿಗಳು ರಕ್ತದಾನ ಮಾಡಿ ಸಹಕರಿಸಿದರು.

Also Read  ಬೈಕ್ - ಲಾರಿ ಢಿಕ್ಕಿ: ವಿದ್ಯಾರ್ಥಿನಿ ಮೃತ್ಯು

error: Content is protected !!
Scroll to Top