ನಿಲ್ಲಿಸಿದ್ದ ಬೈಕ್ ಗೆ ಹಿಂದಿನಿಂದ ಢಿಕ್ಕಿ ಹೊಡೆದು ಕಾರು ಪರಾರಿ..! ➤ ಸವಾರನಿಗೆ ಗಾಯ

(ನ್ಯೂಸ್ ಕಡಬ) newskadaba.com ಸವಣೂರು, ನ. 16. ಕಾರೊಂದು ಬೈಕಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದು ಪರಾರಿಯಾಗಿದ್ದು, ಸವಾರನೋರ್ವ ಗಾಯಗೊಂಡ ಘಟನೆ ಶಾಂತಿಮೊಗರು‌ ಸೇತುವೆ ಸಮೀಪ ನಡೆದಿದೆ.

ಗಾಯಗೊಂಡವರನ್ನು ಕಾಣಿಯೂರು ಸಮೀಪದ ನೂಜಿ ನಿವಾಸಿ ಮಹೇಶ್ ಎಂದು ಗರುತಿಸಲಾಗಿದೆ. ಇವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ನೂಜಿ ಮಹೇಶ್ ರವರು ತಮ್ಮ ಬೈಕ್‌ ನಲ್ಲಿ ಆಲಂಕಾರಿನಿಂದ ತನ್ನ ಮನೆಗೆ ತೆರಳುತ್ತಿದ್ದ ವೇಳೆ ಘಟನಾ ಸ್ಥಳದಲ್ಲಿ ಯಾವುದೋ ಕಾರಣಕ್ಕೆ ಬೈಕ್ ನಿಲ್ಲಿಸಿದ್ದರು. ಅದೇ ಮಾರ್ಗವಾಗಿ ಅಲಂಕಾರಿನಿಂದ ಕುದ್ಮಾರು ಕಡೆಗೆ ಹೋಗುತ್ತಿದ್ದ ಕಾರು ಬೈಕ್ ನ ಹಿಂಬದಿಗೆ ಡಿಕ್ಕಿ ಹೊಡೆದು, ಪರಾರಿಯಾಗಿದೆ ಎನ್ನಲಾಗಿದೆ. ಢಿಕ್ಕಿಯ ರಭಸಕ್ಕೆ ಬೈಕ್ ಸವಾರ ಕೆಳಕ್ಕುರುಳಿ ಗಾಯಗೊಂಡಿದ್ದು, ಇದನ್ನು ನೋಡಿಯೂ ನೋಡದಂತೆ, ಕಾರು ಚಾಲಕ ಪರಾರಿಯಾಗಿದ್ದಾನೆ ಎಂದು ಸ್ಥಳೀಯರು ಆರೋಪಿಸಿ ಆತನ ನಡವಳಿಕೆಯ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Also Read  ಜನರ ಸಹಕಾರದಿಂದ ಪ್ಲಾಸ್ಟಿಕ್ ನಿಷೇಧ ಸಾಧ್ಯ

error: Content is protected !!
Scroll to Top