ಸುಬ್ರಹ್ಮಣ್ಯ: ನಿಯಂತ್ರಣ ತಪ್ಪಿ ಹೊಳೆಗೆ ಬಿದ್ದ ಹಾಲು ಸಾಗಾಟದ ವಾಹನ ➤ ಸಣ್ಣಪುಟ್ಟ ಗಾಯಗಳಿಂದ ಪಾರಾದ ಪ್ರಯಾಣಿಕರು

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ನ. 16. ಹಾಲು ಸಾಗಾಟಕ್ಕೆ ತೆರಳುತ್ತಿದ್ದ ಪಿಕಪ್ ವಾಹನವೊಂದು ನಿಯಂತ್ರಣ ತಪ್ಪಿ ಹೊಳೆಗೆ ಬಿದ್ದ ಪರಿಣಾಮ ಪ್ರಯಾಣಿಕರಿಬ್ಬರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾದ ಘಟನೆ ಕಲ್ಮಕಾರಿನಲ್ಲಿ ನಡೆದಿದೆ.


ಗಾಯಾಳುಗಳನ್ನು ಪಂಜ ಸಮೀಪದ ಚೈತ್ರ ಪ್ರಸಾದ್ ಮತ್ತು ಗಣೇಶ್ ಎಂದು ಗುರುತಿಸಲಾಗಿದೆ. ಅವರನ್ನು ಅಂಬ್ಯುಲೆನ್ಸ್ ಮೂಲಕ ಸುಳ್ಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಲ್ಮಕಾರು ಹಾಲು ಉತ್ಪಾದಕರ ಸಹಕಾರಿ ಸಂಘದಿಂದ ಹಾಲು ಸಾಗಾಟ ಮಾಡಲು ಪಿಕಪ್ ವಾಹನವು ತೆರಳುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ.

Also Read  ಸಂಪೂರ್ಣ ಹದಗೆಟ್ಟಿರುವ ಕಾಯರಡ್ಕ - ಪೆರಿಯಶಾಂತಿ ರಸ್ತೆ ದುರಸ್ತಿಗೆ ಆಗ್ರಹ ► ನಾಳೆ 'ನೀತಿ ತಂಡ'ದಿಂದ ಸಾರ್ವಜನಿಕ ಭಿಕ್ಷಾಟನೆ

error: Content is protected !!
Scroll to Top