ಬಂಟ್ವಾಳ: ಸಿಡಿಲು ಬಡಿದು ಪಂಪ್ ಶೆಡ್ ಗೆ ಹಾನಿ ➤ ಲಕ್ಷಾಂತರ ರೂ. ಮೌಲ್ಯದ ವಸ್ತುಗಳು ಸುಟ್ಟು ಕರಕಲು



(ನ್ಯೂಸ್ ಕಡಬ) newskadaba.com ಬಂಟ್ವಾಳ, ನ. 14. ಕೃಷಿಕರೋರ್ವರ ಪಂಪ್ ಶೆಡ್ ಗೆ ಸಿಡಿಲು ಬಡಿದ ಪರಿಣಾಮ ಲಕ್ಷಾಂತರ ರೂ. ನಷ್ಟ ಸಂಭವಿಸಿದ ಘಟನೆ ಪಂಜಿಕಲ್ಲು ಗ್ರಾಮದ ಎನಿಲಕೋಡಿ ಎಂಬಲ್ಲಿಂದ ವರದಿಯಾಗಿದೆ.








ಪಂಪ್ ಶೆಡ್ಡಿನಲ್ಲಿ ಭಾರೀ ಹೊಗೆ ಸಹಿತ ಬೆಂಕಿ ಕಾಣಿಸಿಕೊಂಡಿದ್ದು, ಶೆಡ್ಡಿನ ಮಾಡು ಸಂಪೂರ್ಣ ಸುಟ್ಟು ಕುಸಿದು ಬೀಳುತ್ತಿದ್ದಂತೆಯೇ ಒಳಗೆ ಗೋಣಿಯಲ್ಲಿ ತುಂಬಿಸಿಟ್ಟಿದ್ದ ಒಣ ಅಡಿಕೆ, ತೆಂಗಿನಕಾಯಿ, ಕೊಳವೆ ಬಾವಿ ಪಂಪ್ ಸಹಿತ ಲಕ್ಷಾಂತರ ರೂ. ಮೊತ್ತದ ವಸ್ತುಗಳು ಸುಟ್ಟು ಕರಕಲಾಗಿದೆ. ಬೆಂಕಿ ಕೆನ್ನಾಲಿಗೆ ಹೆಚ್ಚುತ್ತಿದ್ದಂತೆಯೇ ಸ್ಥಳಕ್ಕೆ ಭೇಟಿ ನೀಡಿದ ಬಂಟ್ವಾಳ ಅಗ್ನಿಶಾಮಕದಳ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.






error: Content is protected !!
Scroll to Top